CINEMA | ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಇದೇ ಮೊದಲ ಬಾರಿ ಕಾಣಿಸಲಿದ್ದಾರೆ ಅನುಷ್ಕಾ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ರಾನ್ಸ್‌ನಲ್ಲಿ ಪ್ರತೀ ವರ್ಷ ನಡೆಯುವ ಕಾನ್ ಫಿಲ್ಮ್ ಫೆಸ್ಟಿವಾಲ್‌ಗೆ ಸಪರೇಟ್ ಫ್ಯಾನ್ ಬೇಸ್ ಇದೆ, ರೆಡ್ ಕಾರ್ಪೆಟ್‌ನಲ್ಲಿ ಸೆಲೆಬ್ರಿಟಿಗಳು ಮಿಂಚುವ ಫೋಟೊಗಳು ವರ್ಷವಿಡೀ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

ಕಳೆದ ಬಾರಿ ನಟಿ ದೀಪಿಕಾ ಪಡುಕೋಣ್‌ಗೆ ಕಾನ್‌ನಿಂದ ಆಹ್ವಾನ ಬಂದಿತ್ತು. ಈ ಬಾರಿ ನಟಿ ಅನುಷ್ಕಾ ಶರ್ಮಾಗೆ ಆಹ್ವಾನ ಬಂದಿದ್ದು, ರೆಡ್ ಕಾರ್ಪೆಟ್‌ನಲ್ಲಿ ಅನುಷ್ಕಾ ಮಿಂಚಲಿದ್ದಾರೆ. ಇದೇ ಮೊದಲ ಬಾರಿಗೆ ಅನುಷ್ಕಾ ಕಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಕಾನ್ ಸಿನಿಮೋತ್ಸವದಲ್ಲಿ ಅನುಷ್ಕಾ ಶರ್ಮಾ ಭಾಗಿಯಾಗಲಿದ್ದಾರೆ ಎಂದು ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮ್ಯಾನುಯೆಲ್ ಲುನಾ ಹೇಳಿದ್ದಾರೆ. ಅನುಷ್ಕಾ ಶರ್ಮಾ ಯಾವ ರೀತಿ ಉಡುಗೆ ತೊಡುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದು, ಅನುಷ್ಕಾ ಕೂಡ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!