CINEMA | ‘ಮೀ ಟೂ’ ಕಾರಣಕ್ಕೆ ‘ಪೊನ್ನಿಯಿನ್ ಸೆಲ್ವನ್’ ರಿಜೆಕ್ಟ್ ಮಾಡಿದ ಅನುಷ್ಕಾ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಸಾಕಷ್ಟು ಹೆಸರು ಮಾಡಿರುವ ಸಿನಿಮಾ, ಇದೀಗ ಪಾರ್ಟ್-2 ಕೂಡ ಬಿಡುಗಡೆಯಾಗುತ್ತಿದ್ದು, ಸಿನಿಮಾ ಬಗ್ಗೆ ಶಾಕಿಂಗ್ ವಿಷಯವೊಂದು ಹರಿದಾಡುತ್ತಿದೆ.

ಬಾಹುಬಲಿ ಸಿನಿಮಾದಿಂದ ಪೌರಾಣಿಕ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಫಿಕ್ಸ್ ಆಗಿದ್ದು, ಪೊನ್ನಿಯಿನ್ ಸೆಲ್ವನ್‌ನ ನಂದಿನಿ ಪಾತ್ರಕ್ಕೆ ಈ ಮೊದಲು ಅನುಷ್ಕಾರನ್ನೇ ಅಪ್ರೋಚ್ ಮಾಡಲಾಗಿತ್ತು.

ಆದರೆ ಮೀಟೂ ಕಾರಣದಿಂದ ಅನುಷ್ಕಾ ಈ ಪಾತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮೀಟೂ ಆರೋಪವಿರುವ ವ್ಯಕ್ತಿಯೊಬ್ಬರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಟೀಂ ಜೊತೆ ಸೇರೋದಿಲ್ಲ ಎಂದು ಅನುಷ್ಕಾ ಹೇಳಿದ್ದಾರಂತೆ. ಒಟ್ಟಾರೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!