ಅಣ್ಣಾವ್ರ ಹುಟ್ಟೂರಲ್ಲಿ ಆತಂಕ: ರಾಜ್ ಕುಟುಂಬಸ್ಥರ ಮನೆ ಮೇಲೆ ಬಾಂಬ್ ದಾಳಿ ಶಂಕೆ, ಕಿಟಕಿ ಗಾಜುಗಳು ಪುಡಿಪುಡಿ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಡಾ. ರಾಜ್‌ಕುಮಾರ್ ಅವರ ಹುಟ್ಟೂರಾದ ಗಾಜನೂರಿನಲ್ಲಿ ಭಾರೀ ಆತಂಕ ಸೃಷ್ಟಿಯಾಗಿದ್ದು, ಡಾ. ರಾಜ್ ಅವರ ಸಂಬಂಧಿಕರೊಬ್ಬರ ಮನೆಯ ಮುಂದೆ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಭೀಕರತೆಗೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಪುಡಿಪುಡಿ‌ಯಾಗಿದ್ದು, ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ದೊಡ್ಡ ಗಾಜನೂರಿನಲ್ಲಿ ವಾಸವಾಗಿರುವ ಡಾ. ರಾಜ್‌ಕುಮಾರ್ ಅವರ ಸಂಬಂಧಿ ಮಂಗಳಮ್ಮ ಎಂಬುವರ ಮನೆಯ ಮುಂಭಾಗದಲ್ಲಿ ಈ ದಿಢೀರ್ ಸ್ಫೋಟ ನಡೆದಿದೆ. ಕಿಡಿಗೇಡಿಗಳು ಯಾರಾದರೂ ಉದ್ದೇಶಪೂರ್ವಕವಾಗಿ ಕಚ್ಚಾ ಬಾಂಬ್ ಎಸೆದಿದ್ದಾರೆಯೇ ಅಥವಾ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ … Continue reading ಅಣ್ಣಾವ್ರ ಹುಟ್ಟೂರಲ್ಲಿ ಆತಂಕ: ರಾಜ್ ಕುಟುಂಬಸ್ಥರ ಮನೆ ಮೇಲೆ ಬಾಂಬ್ ದಾಳಿ ಶಂಕೆ, ಕಿಟಕಿ ಗಾಜುಗಳು ಪುಡಿಪುಡಿ‌