ಸಂಬಳ ಕೊಡಿ ಮಹಾಪ್ರಭು: ಎಪಿ ಸಿಎಸ್‌ಗೆ ಸೆಕ್ರೆಟರಿಯೇಟ್ ನೌಕರರ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವೇತನ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ನೌಕರರು ಎಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೊರೆ ಹೋಗಿದ್ದಾರೆ. ನೌಕರರಿಗೆ ಜನವರಿ ತಿಂಗಳ ವೇತನ ನೀಡಬೇಕು ಎಂದು ನೇರವಾಗಿ ಸಿಎಸ್‌ಗೆ ಪತ್ರ ಬರೆದಿದ್ದಾರೆ. ಜನವರಿ ತಿಂಗಳ ವೇತನವನ್ನು ಕೂಡಲೇ ನೌಕರರಿಗೆ ನೀಡಬೇಕು ಎಂದು ಸಿಎಸ್ ಜವಾಹರರೆಡ್ಡಿ ಅವರಲ್ಲಿ ಖುದ್ದು ನೌಕರರು ಮನವಿ ಮಾಡಿದರು.

ಎಸ್‌ಒ ಅಸೋಸಿಯೇಷನ್‌ನ ಪರವಾಗಿ ಸಂಬಳ ನೀಡುವಂತೆ ಎಪಿ ಸೆಕ್ರೆಟರಿಯೇಟ್ ಸಿಎಸ್‌ಗೆ ಪತ್ರವನ್ನೂ ನೀಡಿದೆ. 6ನೇ ತಾರೀಖು ಕಳೆದರೂ ವೇತನ ನೀಡದೇ ಇರುವುದರಿಂದ ನೌಕರರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ಮನೆ ಬಾಡಿಗೆ, ಇಎಂಐ, ಆಸ್ಪತ್ರೆ ವೆಚ್ಚ, ಶಾಲಾ ಶುಲ್ಕದಂತಹ ವೆಚ್ಚಗಳಿಗೆ ತೊಂದರೆ ಆಗುತ್ತಿದೆ ಎಂದು ನೌಕರರು ಪತ್ರದಲ್ಲಿ ತಮ್ಮ ಗೋಳು ತೋಡಿಕೊಂಡಿದ್ದಾರೆ.

ಸೆಕ್ರೆಟರಿಯೇಟ್‌ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿ ವೇತನವನ್ನು ಅವಲಂಬಿಸಿ ಬದುಕುತ್ತಿದ್ದಾರೆ ಎಂದು ನೌಕರರು ಬಹಿರಂಗಪಡಿಸಿದರು. ಸುಮಾರು 1200 ನೌಕರರ ಪೈಕಿ ಅಸೆಂಬ್ಲಿ, ಹಣಕಾಸು, ಕಂದಾಯ ಮತ್ತು ಜಿಎಡಿ ನೌಕರರಿಗೆ ಮಾತ್ರ ವೇತನ ನೀಡಲಾಗಿದೆ. ನಮ್ಮ ವೇತನವನ್ನು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಸಚಿವಾಲಯದ ನೌಕರರು ಪ್ರಶ್ನಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!