Friday, July 1, 2022

Latest Posts

APMC ಅಧ್ಯಕ್ಷರಾಗಿ ಬಸಲಿಂಗಪ್ಪ ನಾಯಕ ಬೆಳಗುಂದಿ, ಉಪಾಧ್ಯಕ್ಷರಾಗಿ ಭೀಮರೆಡ್ಡಿ ಮುದ್ನಾಳ ಆಯ್ಕೆ

ಯಾದಗಿರಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸೈದಾಪುರ ಮತಕ್ಷೇತ್ರದ ಸದಸ್ಯ ಬಸಲಿಂಗಪ್ಪ ನಾಯಕ ಬೆಳಗುಂದಿ ಹಾಗೂ ಉಪಾಧ್ಯಕ್ಷರಾಗಿ ಯಾದಗಿರಿ ಬಿ ಸದಸ್ಯ ಭೀಮರಡ್ಡಿ ಮುದ್ನಾಳ ಆಯ್ಕೆಯಾದರು.

ಶನಿವಾರ ಸಮಿತಿಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸವಲಿಂಗಪ್ಪ ನಾಯಕ ಬೆಳಗುಂದಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಂತಪ್ಪ ಯದ್ಲಾಪೂರ್ ನಾಮಪತ್ರ ಸಲ್ಲಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಭೀಮರಡ್ಡಿ ಮುದ್ನಾಳ ಹಾಗೂ ರಂಜನಾ ದೇವಿ ನಾಮಪತ್ರ ಸಲ್ಲಿಸಿದರು. ಸಭೆಯಲ್ಲಿ ಒಟ್ಟು 16 ಸದಸ್ಯರು ಉಪಸ್ಥಿತರಿದ್ದು ಮತ ಚಲಾಯಿಸಿದರು. ಬಸವಲಿಂಗಪ್ಪ ನಾಯಕ ಬೆಳಗುಂದಿ ಅವರಿಗೆ 9 ಮತಗಳು ಲಭಿಸಿದರೆ. ಅವರ ಪ್ರತಿಸ್ಪರ್ದಿ ಅನಂತಪ್ಪ ಯದ್ಲಾಪೂರ್ ಅವರಿಗೆ 7 ಮತಗಳು ಪಡೆದರು. 2 ಮತಗಳ ಅಂತರದಿAದ ಬೆಳಗುಂದಿ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ ಬೀಮರಡ್ಡಿ ಮುದ್ನಾಳ 10 ಮತಗಳು ಪಡೆದರು. ರಂಜನಾ ದೇವಿಗೆ 6 ಮತಗಳು ಪಡೆದರು. ಚುನಾವಣೆ ಅಧಿಕಾರಿಯಾಗಿ ಚನಮಲ್ಲಪ್ಪ ಘಂಟಿ ಕಾರ್ಯನಿರ್ವಹಿಸಿ, ಅದ್ಯಕ್ಷ-ಉಪಾದಕ್ಷರ ಆಯ್ಕೆ ಘೋಷಣೆ ಮಾಡಿದರು.

ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಸ್ಥಳೀಯ ಶಾಸಕ ವೆಂಕಟರಡ್ಡಿ ಮುದ್ನಾಳ ಅವರ ಜನಸಂಪರ್ಕ ಕಚೇರಿಗೆ ಆಗಮಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಸಿದ್ದಪ್ಪ ಹೊಟ್ಟಿ, ಬಸಪ್ಪಗೌಡ ಬೆಳಗುಂದಿ, ಬೀಮಣ್ಣಗೌಡ ಕ್ಯಾತನಾಳ, ಮಹಾದೇವಪ್ಪ ಯಲಸತ್ತಿ, ಶರಣಗೌಡ ಕಾಳೆಬೆಳಗುಂದಿ, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಸಿದ್ದಲಿಂಗಪ್ಪ ನಾಯಕ, ಸೋಮನಾಥ ಜೈನ್, ಬಸವರಾಜ ಚಂಡ್ರಿಕಿ, ರುದ್ರಗೌಡ ಪಾಟೀಲ್, ಸೋಮು ರಾಠೋಡ, ಸೋಮು ಮುದ್ನಾಳ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss