ಜನತೆಯಲ್ಲಿ ಕ್ಷಮೆ ಕೇಳಿ ಮತ್ತೆ ಮಾದರಿಯಾದ ಪ್ರಧಾನಿ ಮೋದಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ನಿಯಮಗಳನ್ನು ಪಾಲಿಸುವ ಮೂಲಕ ದೇಶದ ಜನತೆಗೆ ಸದಾ ಹತ್ತಿರವಾಗುತ್ತಿರುತ್ತಾರೆ. ಇದೀಗ ಅಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಹೌದು, ರಾಜಸ್ಥಾನದಲ್ಲಿ ರಾತ್ರಿ 10:00 ಗಂಟೆ ಬಳಿಕ ಧ್ವನಿವರ್ಧಕ ಬಳಸಬಾರದು ಎಂಬ ನಿಯಮವಿದೆ.ಹಾಗಾಗಿ ಜೈಪುರದ ಅಬು ರಸ್ತೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ತಡವಾಗಿ ಬಂದಿದ್ದಾರೆ.ಈ ವೇಳೆ ವೇದಿಕೆಗೆ ಬಂದ ಅವರು, ನಾನು ಇಲ್ಲಿಗೆ ಬರುವುದು ತಡವಾಗಿದೆ. ಹಾಗಾಗಿ ನಿಯಮ ಪಾಲಿಸಬೇಕಾಗಿದೆ. ಇದಕ್ಕಾಗಿ ನಾನು ನಿಮ್ಮ ಕ್ಷಮೆ ಕೋರುತ್ತೇನೆ ಎಂದು ಹೇಳಿದರಲ್ಲದೆ ಭಾಷಣ ಮಾಡದೆ ಸುಮ್ಮನಾಗಿದ್ದಾರೆ.
ಪ್ರಧಾನಿ ಮೋದಿ ಅವರ ಭಾಷಣ ಕೇಳಲೆಂದೇ ದೂರದ ಊರುಗಳಿಂದ ಬಂದಿದ್ದ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಇದರಿಂದ ನಿರಾಶೆಯಾದರೂ ಸಹ ನಿಯಮ ಪಾಲಿಸಿದ ಕಾರಣಕ್ಕೆ ಮೋದಿಯವರ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!