ಎಲೆಕ್ಷನ್‌ ನಲ್ಲಿ ಎಡವಿದ ಆಪ್: ಬಿಜೆಪಿ ಒಲಿದ ಚಂಡೀಗಢ ಮೇಯರ್ ಪಟ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಂಡೀಗಢ ಮೇಯರ್ ಎಲೆಕ್ಷನ್‌ನಲ್ಲಿ ಆಮ್ ಆದ್ಮಿ ಪಾರ್ಟಿ(ಆಪ್‌) ಕೇವಲ ಒಂದು ಮತದ ಅಂತರದಿಂದ ಸೋಲು ಅನುಭವಿಸಿದೆ.

ಈ ಮೂಲಕ ಆಪ್‌ನ ಜಸ್ಬೀರ್ ಸಿಂಗ್ ವಿರುದ್ಧ ಬಿಜೆಪಿಯ ಅನೂಪ್ ಗುಪ್ತಾ ಅವರು ಗೆದ್ದು, ಮೇಯರ್ ಆಗಿ ಆಯ್ಕೆಯಾಗಿದ್ದಾರೆ .

ಮಂಗಳವಾರ ಬೆಳಗ್ಗೆ 11 ಗಂಟೆಗೆ ಮೇಯರ್ ಚುನಾವಣೆ ಆರಂಭವಾಯಿತು. ಒಟ್ಟು 29 ಮತದಾರರ ಪೈಕಿ ಬಿಜೆಪಿಯ ಅನೂಪ್ ಗುಪ್ತಾ ಅವರು 15 ಮತಗಳನ್ನು ಪಡೆದರೆ, ಆಪ್‌ನ ಜಸ್ಬೀರ್ ಸಿಂಗ್ 14 ಮತಗಳನ್ನು ಪಡೆದರು. ಹಾಗಾಗಿ, ಒಂದು ಮತದ ಅಂತರದಲ್ಲಿ ಆಪ್ ವಿರುದ್ದ ಬಿಜೆಪಿ ಜಯ ಸಾಧಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!