ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಆ್ಯಪಲ್‌ ಸಿಇಒ ಟಿಮ್ ಕುಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆ್ಯಪಲ್‌ನ (Apple) ಸಿಇಒ ಟಿಮ್ ಕುಕ್ (Tim Cook) ಅವರು ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ.

ಕಂಪನಿಯು ಪಾಸಿಟಿವ್ ಇಂಪ್ಯಾಕ್ಟ್ ಟೆಕ್ನಾಲಜಿ ಎಂಬ ನಿಮ್ಮ ಕನಸಿನ ಹೊಂದಿದ್ದು ದೇಶಾದ್ಯಂತ ಹೂಡಿಕೆ ಮಾಡಲು ಬದ್ಧವಾಗಿದೆ ಎಂದು ಒತ್ತಿ ಹೇಳಿದರು.

ಟಿಮ್ ಕುಕ್ ಈ ಕುರಿತು ಟ್ವೀಟ್ ಮಾಡಿದ್ದೂ, ನಿಮ್ಮನ್ನು ಭೇಟಿಯಾಗಿದ್ದು ಖುಷಿಯಾಗಿದೆ. ವೈವಿಧ್ಯಮಯ ವಿಷಯಗಳ ಕುರಿತು ವೀಕ್ಷಣೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಭಾರತದಲ್ಲಿ ನಡೆಯುತ್ತಿರುವ ತಂತ್ರಜ್ಞಾನ-ಚಾಲಿತ ರೂಪಾಂತರಗಳನ್ನು ಹೈಲೈಟ್ ಮಾಡಲು ಸಂತೋಷವಾಗಿದೆ ಎಂದು ಹೇಳಿದರು.

ಪ್ರಧಾನಿ ಭೇಟಿಗೂ ಮುನ್ನ ಆ್ಯಪಲ್ ಸಿಇಒ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದಾರೆ.

ಮುಂಬೈನಲ್ಲಿ ಆಪಲ್‌ನ ಮೊದಲ ಇಂಡಿಯಾ ಸ್ಟೋರ್‌ನ ಅದ್ಧೂರಿ ಉದ್ಘಾಟನೆ ಬಳಿಕ ನಾಳೆ ದೆಹಲಿಯಲ್ಲಿ ಮತ್ತೊಂದು ಉದ್ಘಾಟನೆಗೆ ಸಜ್ಜಾಗಿದ್ದು, ಸಾಕೇತ್‌ನ ಸೆಲೆಕ್ಟ್ ಸಿಟಿ ಮಾಲ್‌ನಲ್ಲಿ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಟಿಮ್ ಕುಕ್ ಗ್ರಾಹಕರನ್ನು ಸ್ವಾಗತಿಸಲಿದ್ದಾರೆ.
ಈ ಆ್ಯಪಲ್ ಸ್ಟೋರ್ ಬೇರೆ ಸ್ಮಾರ್ಟ್​ಫೋನ್​ಗಳ ಸ್ಟೋರ್​ಗಿಂತ ಬಹಳ ವಿಭಿನ್ನ ಮತ್ತು ವೈಭವಯುತವಾಗಿದೆ.ಸಾಕೇತ್​ನಲ್ಲಿರುವ ಸ್ಟೋರ್ ಗಾತ್ರದಲ್ಲಿ ಚಿಕ್ಕದಾದರೂ ವಿನ್ಯಾಸ ಇತ್ಯಾದಿ ಎಲ್ಲವೂ ಬಹುತೇಕ ಇದೇ ರೀತಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 20ರಂದು ದೆಹಲಿಯ ಅ್ಯಪಲ್ ಸ್ಟೋರ್ ಉದ್ಘಾಟನೆಗೆ ಅಣಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!