spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಮಲಗುವ ಮುನ್ನ ಈ ಎರಡು ಅಂಗಗಳಿಗೆ ಕೊಬ್ಬರಿಎಣ್ಣೆ ಹಚ್ಚಿಕೊಳ್ಳಿ… ಏಕೆ ಗೊತ್ತಾ?

- Advertisement -Nitte

ರಾತ್ರಿ ಮಲಗುವ ಮುನ್ನ ಪಾದಕ್ಕೆ ಮತ್ತು ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ನಿದ್ದೆ ಮಾಡಿ. ಇದರಿಂದ ಸಾಕಷ್ಟು ಉಪಯೋಗವಿದೆ. ನಿದ್ರಾಹೀನತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಪಾದಕ್ಕೆ ಕೊಬ್ಬರಿಎಣ್ಣೆ ಹಚ್ಚಿಕೊಂಡರೆ ಉಪಯೋಗ ಏನು?

  • ಪಾದಕ್ಕೆ ಕೊಬ್ಬರಿಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳುವುದರಿಂದ ನಿದ್ರಾ ಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
  • ಕಣ್ಣಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ದೃಷ್ಟಿ ಚುರುಕಾಗುತ್ತದೆ.
  • ಪಾದದ ಉರಿ ಕಡಿಮೆಯಾಗುತ್ತದೆ.
  • ಬಿಸಿ ನಿಂಬುರಸಕ್ಕೆ ಕೊಬ್ಬರಿಎಣ್ಣೆ ಮಿಕ್ಸ್ ಮಾಡಿ ಪಾದಕ್ಕೆ ಹಮಸಾಜ್ ಮಾಡಿಕೊಳ್ಳುವುದರಿಂದ ಮಂಡಿ ನೋವು ನಿವಾರಣೆಯಾಗುತ್ತದೆ.

ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದರ ಲಾಭ?

  • ಬಿರುಸು ಚರ್ಮದವರು ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದರಿಂದ ಚರ್ಮ ಮೃದುವಾಗುತ್ತದೆ. ಚರ್ಮ ಹೊಳೆಯುತ್ತದೆ.
  • ಹೊಕ್ಕಳಿಗೆ ಕೊಬ್ಬರಿ  ಎಣ್ಣೆ ಹಾಕಿಕೊಳ್ಳುವುದರಿಂದ ಹೊಟ್ಟೆ ನೋವು, ಕೆಳ ಹೊಟ್ಟೆ ನೋವು, ಸಂಧಿವಾತ, ಮಂಡಿನೋವು, ಕಣ್ಣು ನೋವು ಇಂತಹ ಅನೇಕ ನೋವುಗಳು ನಿವಾರಣೆಯಾಗುತ್ತದೆ.
  • ಅಜೀರ್ಣತೆ ಅಥವಾ ವಿಷಯುಕ್ತ ಆಹಾರ ಸೇವನೆಯಿಂದ ಜಠರದ ಆರೋಗ್ಯವನ್ನೂ ರಕ್ಷಿಸುತ್ತದೆ. ಅಲ್ಲದೇ ಅತಿಸಾರವನ್ನು ನಿಲ್ಲಿಸಲು ಈ ವಿಧಾನ ಉತ್ತಮವಾಗಿದೆ.
  • ಕೊಬ್ಬರಿ ಎಣ್ಣೆಯಲ್ಲಿ ತಂಪಿನ ಗುಣವಿದೆ. ಆದರೂ ದೇಹದ ಶೀತ ಮತ್ತು ಅನಾರೋಗ್ಯವನ್ನು ತಡೆಯುತ್ತದೆ. ದೇಹದಲ್ಲಿ ಶಕ್ತಿ ಹೆಚ್ಚಲು ಹಾಗೂ ಉಷ್ಣವನ್ನು ತಗ್ಗಿಸಲು ಹೊಕ್ಕಳಿಗೆ ಕೊಬ್ಬರಿ ಎಣ್ಣೆ  ಹಾಕಿಕೊಳ್ಳುವು ಬಹಳ ಉಪಯೋಗಕಾರಿ.
  • ಮುಟ್ಟಿನ ದಿನಗಳಲ್ಲಿ ಬರುವ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣ ಉದರದ ನೋವನ್ನು ನಿವಾರಣೆ ಮಾಡುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss