Sunday, August 14, 2022

Latest Posts

ರಾಜ್ಯಸಭೆಗೆ ಅಪ್ರತಿಮ ಸಾಧಕರ ನೇಮಕ: ಪ್ರಧಾನಿ ಮೋದಿ ಮೆಚ್ಚುಗೆಯ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೇಂದ್ರ ಸರಕಾರವು ಲೋಕೋಪಕಾರಿ (ಫಿಲಾಂತ್ರೋಪಿಸ್ಟ್)ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಂಗೀತ ಕ್ಷೇತ್ರದ ದಿಗ್ಗಜ ಇಳೆಯರಾಜ, ಕ್ರೀಡಾ ಕ್ಷೇತ್ರದ ತಾರೆ ಪಿ.ಟಿ.ಉಷಾ, ಚಿತ್ರ ಕಥೆಗಾರ -ನಿರ್ದೇಶಕ ವಿ.ವಿಜಯೇಂದ್ರ ಅವರನ್ನು ರಾಜ್ಯಸಭೆಗೆ ನೇಮಿಸಲಾಗಿದೆ.
ಈ ನಾಲ್ವರು ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧಕರನ್ನು ರಾಜ್ಯಸಭೆಗೆ ನೇಮಕಗೊಳಿಸಿದ ಕೇಂದ್ರ ಸರಕಾರದ ಕಾಳಜಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಡಾ.ಡಿ.ವೀರೇಂದ್ರ ಹೆಗ್ಗಡೆಯವರಂತಹ ಸಮುದಾಯ ಸೇವೆಯಲ್ಲಿ ತೊಡಗಿರುವ ಅಪ್ರತಿಮ ಸಾಧಕರು ರಾಜ್ಯಸಭೆಗೆ ನೇಮಕಗೊಂಡಿರುವುದರಿಂದ ಸಂಸದೀಯ ಕಲಾಪಗಳು ಇನ್ನಷ್ಟು ಸಂಪನ್ನಗೊಳ್ಳಲಿವೆ ಎಂಬುದಾಗಿ ಹೇಳಿರುವ ಪ್ರಧಾನಿಯವರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮುಂದೆ ಪ್ರಾರ್ಥನೆ ಮಾಡುವ ಅವಕಾಶ ಪಡೆದಿದ್ದ ನಾನು, ಅವರು ಶಿಕ್ಷಣ, ಆರೋಗ್ಯ ,ಸಂಸ್ಕೃತಿ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಳನ್ನೂ ಕಂಡಿದ್ದೇನೆ ಎಂದಿದ್ದಾರೆ.

ಇಳೆಯರಾಜ ಅವರು ಪೀಳಿಗೆಗಳನ್ನು ಪುಳಕಿತಗೊಳಿಸುವ ತಮ್ಮ ಸಂಗೀತ ಕಂಪಿನಿಂದ ಅದ್ಭುತವಾಗಿ ಪ್ರಭಾವಿತಗೊಳಿಸಿದವರು. ಅವರ ಜೀವನ ಯಾನ ಕೂಡಾ ಪ್ರೇರಣಾದಾಯಿ. ಅವರ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ಮಾಡಿರುವ ಸಾಧನೆ ಕೂಡಾ ಅದ್ಭುತ.

ಇದೇ ರೀತಿ ಪಿ.ಟಿ.ಉಷಾ ಅವರು ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಸೂರ್ತಿದಾಯಕವಾದುದು .

ಬಾಹುಬಲಿಯಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಅವರ ಸಾಧನೆಯೂ ಅನನ್ಯ ಎಂಬುದಾಗಿ ಪ್ರಧಾನಿ ಶ್ಲಾಘಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss