ಭಾರತ ಚುನಾವಣಾ ಆಯೋಗದಿಂದ ಮೈಸೂರಿಗೆ ಚುನಾವಣಾ ವೆಚ್ಚ ವೀಕ್ಷಕರ ನೇಮಕ

ಹೊಸದಿಗಂತ ವರದಿ ಮೈಸೂರು:

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬoಧ ಭಾರತ ಚುನಾವಣಾ ಆಯೋಗದಿಂದ ಮೈಸೂರು ಜಿಲ್ಲೆಗೆ 9 ಮಂದಿ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಚುನಾವಣಾ ವೆಚ್ಚಕ್ಕೆ ಸಂಬಧಿಸಿದ ಯಾವುದೇ ಅಹವಾಲುಗಳನ್ನು ಸಂಬoಧಪಟ್ಟ ವೆಚ್ಚ ವೀಕ್ಷಕರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.

ವೆಚ್ಚ ವೀಕ್ಷಕರ ವಿವರಗಳು:
ಪಿರಿಯಾಪಟ್ಟಣದ ವೆಚ್ಚ ವೀಕ್ಷಕರಾಗಿ ಪ್ರೀತಮ್ ಕುಮಾರ್.ಹೆಚ್ ಟ್ಯುರೆರಾವ್ (ಮೊ.ಸಂ.6366759228), ಕೆ.ಆರ್.ನಗರದ ವೆಚ್ಚ ವೀಕ್ಷಕರಾಗಿ ವೀರೇಂದ್ರ ಕುಮಾರ್ ಪಟೇಲ್ (ಮೊ.ಸಂ.7795695621), ಹುಣಸೂರಿನ ವೆಚ್ಚ ವೀಕ್ಷಕರಾಗಿ ರಾಮಕೃಷ್ಣ ಕೆಡಿಯ (ಮೊ.ಸಂ.9110644008), ಎಚ್.ಡಿ.ಕೋಟೆ ಮತ್ತು ನಂಜನಗೂಡು ವೆಚ್ಚ ವೀಕ್ಷಕರಾಗಿ ಹೇಮಂತ್ ಹಿಂಗೋನಿಯಾ (ಮೊ.ಸಂ.8105841264, 74831774339), ಚಾಮುಂಡೇಶ್ವರಿ ಕ್ಷೇತ್ರದ ವೆಚ್ಚವೀಕ್ಷಕರಾಗಿ ಧೀರೇಂದ್ರ ಮಣಿ ತ್ರಿಪಾಟಿ (ಮೊ.ಸಂ.8431774339), ಕೃಷ್ಣರಾಜ ಕ್ಷೇತ್ರದ ವೆಚ್ಚ ವಿಕ್ಷಕರಾಗಿ ನಿತಿನ್ ಕುಮಾರ್ ಜೈಮಾನ್ (ಮೊ.ಸಂ.9964174107), ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರದ ವೆಚ್ಚ ವಿಕ್ಷಕರಾಗಿ ರಾಜೇಶ್ ಮಹಾಜನ್ (ಮೊ.ಸಂ.9591502098), ವರುಣ ಕ್ಷೇತ್ರದ ವೆಚ್ಚ ವೀಕ್ಷಕರಾಗಿ ಗಜೇಂದ್ರ ಸಿಂಗ್ (ಮೊ.ಸಂ.7483146572) ಮತ್ತು ಟಿ.ನರಸೀಪುರದ ವೆಚ್ಚ ವಿಕ್ಷಕರಾಗಿ ಸಂದೀಪ್ ಕುಮಾರ್ ಮಿಶ್ರಾ (ಮೊ.ಸಂ.9482264220) ಅವರನ್ನು ನೇಮಕ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!