Wednesday, August 10, 2022

Latest Posts

“ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವನ ನೆನಪು ಸದಾ ಇರುತ್ತೆ”: ಶಿವಣ್ಣನಿಗೆ ಸಂತಾಪ ಪತ್ರ ಬರೆದ ತಮಿಳುನಾಡು ಸಿಎಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಟ್ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಇಡೀ ಕರುನಾಡನ್ನೇ ದುಖಃದ ಕಡಲಿನಲ್ಲಿ ತೇಲಿಸುತ್ತಿದೆ. ಅಪ್ಪು ನಿಧನಕ್ಕೆ ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿ-ಕ್ರಿಕೆಟ್ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಇದೀಗ  ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಶಿವ ರಾಜಕುಮಾರ್’ಗೆ ಸಂತಾಪ ಪತ್ರ  ಬರೆದು ಸಾಂತ್ವನ ನುಡಿಗಳನ್ನಾಡಿದ್ದಾರೆ.

“ನಮ್ಮ ಸಹೋದರ ಪುನೀತ್ ಸಾವು ನನಗೆ ಅರಿಗಿಸಿಕೊಳ್ಳಲಾಗದ ತುತ್ತಾಗಿದೆ. ಸಂತಾಪ ಸೂಚಿಸಲು ಮಾತೇ ಬರುತ್ತಿಲ್ಲ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಬಹಳ ಅನ್ಯೋನ್ಯವಾಗಿದೆ. ನನಗೆ ಅಪ್ಪು ಅಗಲಿಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ”.

“ನನ್ನ ತಂದೆ ಕರುಣಾನಿಧಿ ತೀರಿಕೊಂಡಾಗ ಸಂತಾಪ ಸೂಚಿಸಲು ಅಪ್ಪು ಗೋಪಾಲಪುರಂಗೆ ಬಂದಿದ್ದ. ಆ ಕ್ಷಣಗಳು ಇನ್ನು ಕಣ್ಣಿಗೆ ಕಟ್ಟಿದಂತಿದೆ. ನನ್ನ ಸಂತಾಪವನ್ನು ತಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ”

“ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನೆಪು ಸದಾ ನಮ್ಮೊಂದಿಗೆ ಇರುತ್ತದೆ. ಕರ್ನಾಟಕ ಮೂಲ್ಯವಾದ ರತ್ನವನ್ನು ಕಳೆದುಕೊಂಡಿದೆ. ರಾಜಕುಮಾರ್ ಅವರ ಹಿರಿಯ ಮಗನಾಗಿ ಈ ನೋವಿನ ಗಳಿಗೆಯಲ್ಲಿ ಕುಟುಂಬಸ್ಥರಿಗೆ ಧೈರ್ಯದ ಚಿಲುಮೆಯಾಗಿ ನಿಲ್ಲುತ್ತೀರೆಂದು ಭಾವಿಸುತ್ತೇನೆ ಎಂದು ಶಿವ ರಾಜಕುಮಾರ್ ಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss