Tuesday, August 16, 2022

Latest Posts

ಗುರುಕಿರಣ್ ಹುಟ್ಟಹಬ್ಬದ ಸಮಾರಂಭವೇ ‘ಅಪ್ಪು’ ಕೊನೆಯ ಕಾರ್ಯಕಮ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಚೊಚ್ಚಲ ಚಿತ್ರಕ್ಕೆ ಸಂಗೀತ ನೀಡಿದ್ದ ಗುರುಕಿರಣ್ ಹುಟ್ಟಹಬ್ಬದ ಸಮಾರಂಭವೇ ಕಡೆಯ ಅಪ್ಪು ಅವರ ಸಮಾರಂಭವಾಗಿದೆ.
ನಿನ್ನೆಯಷ್ಟೇ ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಮಾರಂಭಕ್ಕೆ ನಟ ಪುನೀತ್ ರಾಜ್ ಕುಮಾರ್ ಕೂಡ ತೆರಳಿದ್ದರು.
ರಮೇಶ್ ಅರವಿಂದ್ ಜೊತೆ ಗುರುಕಿರಣ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅಪ್ಪು, ಗುರುಕಿರಣ್​ಗೆ ಹುಟ್ಟುಹಬ್ಬದ ಶುಭ ಕೋರಿದ್ದರು. ಕೆಲ ಸಮಯ ಪಾರ್ಟಿಯಲ್ಲಿ ಭಾಗವಹಿಸಿ ಹರಟೆ ಹೊಡೆದಿದ್ದರು. ಆದರೆ, ಈ ಪಾರ್ಟಿಯೇ ‘ಯುವರತ್ನ’ನ ಕೊನೆಯ ಪಾರ್ಟಿಯಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ.
ನಾಯಕ ನಟನಾಗಿ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಪುನೀತ್ ಸ್ಯಾಂಡಲ್‌ವುಡ್​ಗೆ ಎಂಟ್ರಿ ಕೊಟ್ಟಿದ್ದರು. ಬಾಲನಟನಾಗಿ ನಟಿಸಿದ್ದ ಪುನೀತ್​ಗೆ ‘ಅಪ್ಪು’ ಸಿನಿಮಾ ನಾಯಕ ನಟನಾಗಿ ಮೊದಲ ಸಿನಿಮಾ. ಈ ಸಿನಿಮಾಗೆ ಸಂಗೀತ ನೀಡಿದ್ದು ಗುರುಕಿರಣ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss