ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಡೀ ಚಿತ್ರರಂಗಕ್ಕೆ ಇಂದು ಕರಾಳ ದಿನ. ಯಾರೂ ಊಹಿಸಿಕೊಳ್ಳಲಾಗದ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರೆಗಿದೆ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನಂತೆ ನಮ್ಮನೆಲ್ಲ ಬಿಟ್ಟು ದೂರದ ಊರಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೋಗಿದ್ದಾರೆ.
ತಮ್ಮನ ನಿಧನದಿಂದ ಆಘಾತವಾದ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ , ಮೊದಲು ನಾನು ಹೋಗಬೇಕಿತ್ತು, ಮಿಸ್ ಆಗಿ ನನ್ನ ತಮ್ಮ ಹೋಗಿದ್ದಾನೆ ಎಂದು ಭಾವುರಾಗಿದ್ದಾರೆ.
ಮಾಧ್ಯಮಗಳ ಎದುರು ಭಾವುಕರಾಗಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್,ಅಪ್ಪು ನನ್ನನ್ನು ಉಳಿಸಿದ , ಆದರೆ ಅವನನ್ನು ಉಳಿಸಲು ಆಗಲಿಲ್ಲ. ಎಲ್ಲರೂ ನನ್ನ ತಮ್ಮನನ್ನು ಕಳುಹಿಸಿಕೊಡಿ ಎಂದು ಅವರು ಕಂಬನಿ ಮಿಡಿದಿದ್ದಾರೆ.