ಹೊಸದಿಗಂತ ಆನ್ ಲೈನ್ ಡೆಸ್ಕ್:
ಹಲವು ಸಾಮಾಜಿಕ ಕಾರ್ಯ ಗಳಲ್ಲಿ ಸಕ್ರೀಯವಾಗಿರುವ ಬಂಟ್ವಾಳ ತಾಲೂಕಿನ ಮಂಚಿ- ಕೊಳ್ನಾಡು ಶ್ರೀಕೃಷ್ಣ ಮಿತ್ರ ಮಂಡಳಿ ವಾರ್ಷಿಕೋತ್ಸವ ಸಮಾ ರಂಭವು ಏ.16 ರಂದು ಮಂಚಿಯ ನೂಜಿಬೈಲು ಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಂಜೆ ೫ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317 ಡಿ ವಲಯಾಧ್ಯಕ್ಷ ಮನೋರಂಜನ್ ಕೆ.ಆರ್. ಉದ್ಘಾಟಿಸುವರು.
ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಂಚಾಲಕಿ ಶಾಂತಲಾ ಎನ್. ಭಟ್ ಅಧ್ಯಕ್ಷತೆ ವಹಿಸುವರು. ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಎಸ್. ಕಾಮತ್, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅತಿಥಿಯಾಗಿ ಭಾಗವಹಿಸುವರು. ಇತ್ತೀಚೆಗೆ ನಿವೃತ್ತಿ ಹೊಂದಿದ ಮಂಚಿ ಬಿಎಸ್ಎನ್ಎಲ್ ಉಪಕೇಂದ್ರ ನೌಕರ ನಾರಾಯಣ ಅವರಿಗೆ ಈ ಸಂದರ್ಭ ‘ಸಾರ್ವಜನಿಕ ಅಭಿನಂದನೆ’ ಸಲ್ಲಿಸಲಾಗುವುದು.ಬಳಿಕ ಶ್ರೀ ಹನುಮಗಿರಿ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.