ಜೆರುಸಲೇಂನಲ್ಲೂ ‘ಕಲ್ಲು ತೂರಾಟ’ಗಾರರ ಹಾರಾಟ, ಇಸ್ರೇಲ್ ಕೊಡ್ತಿರೋ ಉತ್ತರ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೆರುಸೆಲೆಮ್‌ನಲ್ಲಿ ನಡೆದ ಪ್ಯಾಲೇಸ್ಟೇನಿಯನ್‌ ಗಲಭೆ ಬಳಿಕ, ಯಾವುದೇ ಕಾರ್ಯಾಚರಣೆಯನ್ನು ನಡೆಸಲು ಭದ್ರತಾ ಪಡೆಗಳಿಗೆ ʻಮುಕ್ತ ಅನುಮತಿʼ ನೀಡಲಾಗುವುದು ಎಂದು ಅಲ್ಲಿನ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ. ಇಸ್ರೇಲಿ ಪ್ರಜೆಗಳಿಗೆ ಭದ್ರತೆಯನ್ನು ಒದಗಿಸುವುದು ಇಸ್ರೇಲ್‌ನ ಮುಖ್ಯ ಗುರಿ ಎಂದು ಪ್ರಧಾನಿ ಹೇಳಿದರು.

ಇಸ್ಲಾಂನ ಪವಿತ್ರ ಸ್ಥಳ ಮತ್ತು ಯಹೂದಿಗಳು ಟೆಂಪಲ್ ಮೌಂಟ್ ಎಂದು ಗೌರವಿಸುವ ಅಲ್ ಅಕ್ಸಾ ಮಸೀದಿಯ ಕಾಂಪೌಂಡ್‌ನಲ್ಲಿ ಮಾರ್ಚ್ 15 ರಂದು ಪ್ಯಾಲೆಸ್ಟೀನಿಯನ್ನರು ಕಲ್ಲು ಮತ್ತು ಪಟಾಕಿಗಳನ್ನು ಎಸೆದು ಗಲಭೆ ಸೃಷ್ಟಿಸಿದರು. ಗಲಭೆ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಅದರಲ್ಲಿ ಇಬ್ಬರು ಸ್ಥಿತಿ ಚಿಂತಾಜನಕವಾಗಿದ್ದು, ಸುಮಾರು 150 ಮಂದಿ ಪ್ಯಾಲೆಸ್ಟೇನಿಯನ್ನರು ಗಾಯಗೊಂಡಿರುವುದಾಗಿ ತಿಳಿದಿದೆ. ಸ್ಥಳದಲ್ಲಿದ್ದ 470 ಜನರನ್ನು ಪೊಲೀಸರು ಬಂಧಿಸಿ ಕೆಲವರನ್ನು ಬಿಡುಗಡೆ ಮಾಡಲಾಯಿತು.

ಟೆಂಪಲ್‌ ಮೌಂಟ್‌ಗೆ ಪ್ರವೇಶಿಸುವ ಯಹೋದಿಗಳನ್ನು ತಡೆಯಲು ಪ್ಯಾಲೆಸ್ಟೇನಿಯನ್‌ನ ನೂರಾರು ಯುವಕರು ಮುಖವಾಡ ಧರಿಸಿ, ಕಲ್ಲುಗಳನ್ನು ಎಸೆದು ಗಲಭೆ ಸೃಷ್ಟಿಸಿದ್ದಾರೆಂದು ಅಲ್ಲಿನ ಪೊಲೀಸ್‌ ಮೂಲಗಳು ಹೇಳಿವೆ. ಪವಿತ್ರ ಸ್ಥಳದ ಉಸ್ತುವಾರಿ ಹೊಂದಿರುವ ಪ್ಯಾಲೇಸ್ಟಿನಿಯನ್ ಪ್ರಾಧಿಕಾರ ಮತ್ತು ಜೋರ್ಡಾನ್, ತಮ್ಮ ಜಂಟಿ ಹೇಳಿಕೆಯಲ್ಲಿ ಅಪಯಕಾರಿ ಬೆಳವಣಿಗೆಗೆ ಇಸ್ರೇಲ್‌ ಕಾರಣ ಎಂದು ಆರೋಪ ಮಾಡಿದೆ.

ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ “ಪರಿಸ್ಥಿತಿಯನ್ನು ಶಾಂತಗೊಳಿಸಲು, ಪ್ರಚೋದನೆಗಳನ್ನು ಕೊನೆಗೊಳಿಸಲು ಎಲ್ಲಾ ನಾಯಕರನ್ನು ಶ್ರಮಿಸಬೇಕು. ಜೆರುಸಲೆಮ್‌ನಲ್ಲಿರುವ ಪವಿತ್ರ ಸ್ಥಳಗಳ ಯಥಾಸ್ಥಿತಿಯನ್ನು ಎತ್ತಿಹಿಡಿಯವಂತೆ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!