ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೆರ್ಡೂರಿನಲ್ಲಿ ಶಿಲಾಯುಗದ‌ ಪ್ರಾಚ್ಯವಶೇಷಗಳು‌ ಪತ್ತೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉಡುಪಿ‌ ತಾಲೂಕಿನ ಪೆರ್ಡೂರು ಗ್ರಾಮದ ಮಠದ ಮೂಲೆ ಪ್ರದೇಶದಲ್ಲಿ ನೂತನ‌ ಶಿಲಾಯುಗಕ್ಕೆ ಸಂಬಂಧಿಸಿದ ರಿಂಗ್ ಸ್ಟೋನ್ (ಉಂಗುರಾಕೃತಿಯ ಕಲ್ಲು)ನ್ನು ಹಾಗೂ ಸುಮಾರು 16-17ನೇ ಶತಮಾನಕ್ಕೆ ಸೇರಿದ ಕೊಟೆಯ ಪ್ರಾಚ್ಯವಶೇಷಗಳನ್ನು ಯು. ಕಮಲಬಾಯಿ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕ ಕೆ. ಶ್ರೀಧರ್ ಭಟ್ ಹಾಗೂ ಇತಿಹಾಸ ಮತ್ತು‌ ಪುರಾತತ್ತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಪತ್ತೆ ಮಾಡಿದ್ದಾರೆ.
ನೂತನ‌ ಶಿಲಾಯುಗಕ್ಕೆ ಸೇರಿದ ರಿಂಗ್ ಸ್ಟೋನ್ 10 ಸೆಂ.ಮೀ ವ್ಯಾಸವನ್ನು ಹೊಂದಿರುತ್ತದೆ.‌ ಇದನ್ನು ಕ್ರಿ. ಪೂ 3000 ವರ್ಷಗಳ ಹಿಂದೆ ಆಹಾರ ಸಂಬಂಧಿ ಉಪಕರಣವಾಗಿ ಬಳಸುತ್ತಿದ್ದರೆಂದು ಸಂಶೋಧನಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಮಠದ ಮೂಲೆ ಪ್ರದೇಶದಲ್ಲಿ ಕೋಟೆಯ ಅವಶೇಷಗಳಾದ ಕಾವಲು ಗೋಪುರ, ಪ್ರಾಕಾರ ಗೋಡೆ ಹಾಗೂ ಸ್ಥಳೀಯ ಕಲ್ಲುಗಳನ್ನು ಬಳಸಿ ನಿರ್ಮಿಸಲ್ಪಟ್ಟ ಸುಮಾರು 8 ಬಾವಿಗಳನ್ನು ಪತ್ತೆ ಮಾಡಲಾಗಿದೆ.
ಸ್ಥಳೀಯರು ಇದನ್ನು ದೇವಾಲಯದ ಕುರುಹುಗಳೆಂದು ಭಾವಿಸಲಾಗಿದೆ. ಆದರೆ ಈ ಪ್ರಾಚ್ಯವಶೇಷಗಳು ಕೋಟೆಯ ಒಂದು ಪ್ರಕಾರವಾದ ಜಲದುರ್ಗವನ್ನು ಹೋಲುತ್ತದೆ. ಮಾತ್ರವಲ್ಲದೇ ‌ಇಲ್ಲಿ ಭಗ್ನಗೊಂಡ‌ ನಾಗ ಶಿಲ್ಪಗಳು, ಕುಳಿಗಳು ಪತ್ತೆಯಾಗಿರುತ್ತವೆ. ಹಾಗಾಗಿ ಇಲ್ಲಿ ದೊರೆತ ಪ್ರಾಚ್ಯವಶೇಷಗಳ ಹಿನ್ನೆಲೆಯನ್ನು ಗಮನಿಸಿ ಈ ಪ್ರದೇಶದ ಇತಿಹಾಸವು ಸುಮಾರು ಕ್ರಿ.ಪೂ 3000 ವರ್ಷಗಳಷ್ಟು ಪ್ರಾಚೀನವೆಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಸ್ಥಳೀಯರಾದ ನಾರಾಯಣ ‌ಕುಲಾಲ್, ಜಯ ಕುಲಾಲ್, ಸತೀಶ್ ನಾಯ್ಕ್, ವಿಠ್ಠಲ ನಾಯ್ಕ್ ಅವರು ಸಹಕಾರ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss