ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ಒಂದು ಕೆಜಿ ಟೊಮ್ಯಾಟೊ ಕೊಳ್ಳೋಕೆ ಹೋದ ಜನ ಅರ್ಧ ಕೆಜಿ ಕೊಂಡು ಸುಮ್ಮನಾಗ್ತಿದ್ದಾರೆ. ಇದೀಗ ಮಳೆಯಿಂದಾಗಿ ಟೊಮ್ಯಾಟೊ ಬೆಲೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಯಿದ್ದು, ಟೊಮ್ಯಾಟೋ ಮುಟ್ಟೋದಕ್ಕೂ ಹೆದರುವಂತಾಗಿದೆ.
ಇದೀಗ ಕೊಂಚ ಕಡಿಮೆಯಾಗಿದ್ದ ಟೊಮ್ಯಾಟೊ ಬೆಲೆ ಏಕಾಏಕಿ ಹೆಚ್ಚಾಗುವ ಸಾಧ್ಯತೆ ಇದೆ. ಭಾರೀ ಮಳೆಯಿಂದಾಗಿ ಬೆಳೆ ಹಾಳಾದರೆ ಇರುವ ಸ್ಟಾಕ್ ಬೆಲೆ ಏರಿಕೆಯಾಗುತ್ತದೆ. ಇನ್ನು ರಾಜ್ಯದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಟೊಮ್ಯಾಟೊ ಬೆಳೆಯುತ್ತಾರೆ. ಆದರೆ ಹವಾಮಾನ ವೈಪರೀತ್ಯದಿಂದ ಟೊಮ್ಯಾಟೊ ಬೆಳೆಗೆ ಹಾನಿಯಾಗಿದೆ. ಹೀಗಾಗಿ ಟೊಮ್ಯಾಟೊ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.