ನೀವು ಮೊಸರು ಪ್ರಿಯರೇ…?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಸಿಗೆಯ ಬಿಸಿಯಲ್ಲಿ ಬೇಯುತ್ತಿದ್ದೇವೆ. ಪರಿಸರದ ತಾಪಮಾನ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ದೇಹ ತಂಪಾಗಿರಿಸುವುದು ತುಂಬಾನೇ ಮುಖ್ಯ. ನಿಯಮಿತವಾಗಿ ಮೊಸರನ್ನು ಆಹಾರದೊಂದಿಗೆ ಅಥವಾ ನೇರವಾಗಿ ಸೇವಿಸುವುದರಿಂದ ದೇಹ ತಂಪಾಗಿರುವುದಲ್ಲದೆ ಆರೋಗ್ಯವಂತಾಗಿರಲು ಸಹಕಾರಿಯಾಗಿದೆ.

ಮೊಸರು ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಬೇಸಗೆ ಸಮಯದಲ್ಲಿ ನಿತ್ಯ ಮೊಸರು ಸೇವಿಸುವುದನ್ನು ಮರೆಯದಿರಿ. ಮೊಸರು ಸೇವನೆಯಿಂದ ಮೂಳೆ ಹಾಗೂ ಹಲ್ಲುಗಳು ಬಲಿಷ್ಠವಾಗಿ ಆರೋಗ್ಯಯುತವಾಗಿರುತ್ತದೆ. ಮೊಸರು ಸೇವಿಸಿದರೆ ತೂಕ ಕಡಿಮೆಯಾಗುವುದರ ಜೊತೆಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನೂ ನಿವಾರಿಸಲು ಸಹಕಾರಿ ಎಂಬುದು ಸಾಬೀತಾಗಿದೆ. ಮೊಸರನ್ನು ಫ್ರೀಜರ್‌ನಲ್ಲಿಟ್ಟು ಸೇವಿಸಬೇಡಿ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!