ಪ್ರತಿದಿನ ಸಮೋಸಾಗಳನ್ನು ತಿನ್ನುತ್ತಿದ್ದೀರಾ? ಹಾಗಾದರೆ ನಿಮ್ಮ ಹೃದಯ ಅಪಾಯದಲ್ಲಿದೆ ಎಂದರ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮೋಸಾದ ರುಚಿ  ಆಹಾರ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತದೆ. ಒಮ್ಮೆ ಇದರ ರುಚಿ ನೋಡಿದ್ರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಒಂದು ಅಥವಾ ಎರಡು ತಿಂದರೆ ಎಂತಹ ಸಮಸ್ಯೆ ಇರುವುದಿಲ್ಲ. ಆದರೆ, ಪ್ರತಿದಿನ ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸಂಪೂರ್ಣ ಎಣ್ಣೆಯಿಂದ ತಯಾರಾಗುವ ಸಮೋಸಾ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅದೂ ಅಲ್ಲದೆ ಮಾರುಕಟ್ಟೆಯಲ್ಲಿ ಸಿಗುವ ಸಮೋಸಗಳನ್ನು ಕಾಯಿಸಿದ ಎಣ್ಣೆಯಲ್ಲಿ ಮತ್ತೆ ಮತ್ತೆ ಕರಿಯಲಾಗುತ್ತದೆ. ಈ ರೀತಿಯ ಎಣ್ಣೆಯನ್ನು ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯಾಘಾತದ ಸಮಸ್ಯೆಗಳ ಸಾಧ್ಯತೆ ಹೆಚ್ಚು. ಸಮೋಸ ತಿನ್ನುವುದರಿಂದ ದೇಹದಲ್ಲಿ ಕ್ಯಾಲೋರಿ ಹೆಚ್ಚಾಗುತ್ತದೆ. ಬೊಜ್ಜಿನ ಸಮಸ್ಯೆಯನ್ನು ಕೂಡಾ ಎದುರಿಸಬೇಕಾಗುತ್ತದೆ.

ಇದರಲ್ಲಿರುವ ಟ್ರಾನ್ಸ್ ಕೊಬ್ಬು ಹೃದ್ರೋಗ ಮತ್ತು ಸ್ಥೂಲಕಾಯದಂತಹ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದರಲ್ಲಿರುವ ಆಲೂಗಡ್ಡೆ, ಮೈದಾ ಮತ್ತು ಎಣ್ಣೆ ಚರ್ಮಕ್ಕೆ ಆರೋಗ್ಯಕರವಲ್ಲ. ಅತಿಯಾದ ಸೇವನೆಯಿಂದ ಚರ್ಮದ ಮೇಲೆ ಸುಕ್ಕುಗಳು ಮತ್ತು ಮೊಡವೆಗಳು ಉಂಟಾಗಬಹುದು. ಬೇಗನೆ ವಯಸ್ಸಾದ ಛಾಯೆಗಳು ಕಾಣುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!