ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋವಾಗೆ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರ ಭಾರೀ ಶಾಕ್ ನೀಡಿದೆ.
ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿ ತಿನ್ನದಂತೆ ಗೋವಾ ಸರ್ಕಾರ ನಿರ್ಭಂದ ಹೇರಿದೆ. ರಾಜ್ಯದಲ್ಲಿ ಸ್ವಚ್ಛತೆ ಕಾಪಾಡೋ ಉದ್ದೇಶದಿಂದ ಪ್ರವಾಸಿಗರು ಎಲ್ಲೆಲ್ಲೋ ಅಡುಗೆ ಮಾಡಿ ತ್ಯಾಜ್ಯ ಬಿಸಾಕದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಗೋವಾಗೆ ಹೋಗುವವರು ವಾಹನದಲ್ಲಿ ಗ್ಯಾಸ್ ಸಿಲಿಂಡರ್, ಸ್ಟವ್ ಮತ್ತು ಪಾತ್ರೆ- ಪಗಡೆ ಸಾಗಿಸಿದ್ರೆ ಗಡಿಯಲ್ಲೇ ಸೀಝ್ ಮಾಡೋದಾಗಿ ಗೋವಾ ಸರ್ಕಾರ ತಿಳಿಸಿದೆ. ಈ ಹಿನ್ನೆಲೆ ಗೋವಾ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ತಪಾಸಣೆ ಪ್ರಾರಂಭವಾಗಿದೆ.
ಗೋವಾ ರಾಜ್ಯದ ನಿಯಮವನ್ನು ಪ್ರವಾಸಿಗರು ಹಾಗೂ ಕಾರ್ಮಿಕರು ವಿರೋಧಿಸುತ್ತಿದ್ದಾರೆ. ಲಾರಿ ಚಾಲಕರಿಗೂ ಇಂತಹ ನಿಯಮ ಮಾಡಿದ್ರೆ ಮುಂದಿನ ದಿನ ಹೋರಾಟದ ಹಾದಿ ಹಿಡಿಯಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.