ನೀವು ಈ ಆ್ಯಪ್ ಬಳಸುತ್ತಿದ್ದೀರಾ? ಹಾಗಾದರೆ ಇಂದೇ ತೆಗೆದು ಹಾಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪೇಮೆಂಟ್‌ ಅಪ್ಲಿಕೇಷನ್‌ ಗಳಲ್ಲೊಂದಾದ ಸ್ಲೈಸ್ ಆ್ಯಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಸಾಮಾನ್ಯವಾಗಿ ದುರುದ್ದೇಶಪೂರಿತ ಅಪ್ಲಿಕೇಷನ್‌ ಗಳನ್ನುಗುರುತಿಸಲು ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಮೊಬೈಲ್‌ನಲ್ಲಿರುವ ಅಪ್ಲಿಕೇಷನ್‌ ಗಳನ್ನು ಸ್ಕ್ಯಾನ್‌ ಮಾಡುತ್ತದೆ. ಈ ಸಂದರ್ಭದಲ್ಲಿ ಹಾರ್ಮ್‌ ಫುಲ್‌ ಆಕ್ಟಿವಿಟಿಗಳು ಕಂಡುಬಂದಿವೆ. ಸ್ಲೈಸ್ ಆ್ಯಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ಪ್ಲೇ ಪ್ರೊಟೆಕ್ಟ್‌ “ಸ್ಲೈಸ್ ನಿಮ್ಮ ಸಾಧನವನ್ನು ಅಪಾಯಕ್ಕೆ ಸಿಲುಕಿಸುತ್ತದೆ” ಎಂದು ಹೇಳುವ ಅಧಿಸೂಚನೆಯನ್ನು ಕಳುಹಿಸಿದೆ.

ಸ್ಲೈಸ್‌ ಅಪ್ಲಿಕೇಷನ್‌ ಅನ್ನು ಗೂಗಲ್‌ ಹಾನಿಕಾರಕ ಎಂದಿದೆ. ಹಾಗೂ ಅದನ್ನು ಕೂಡಲೇ ಅನ್‌ಇನ್‌ಸ್ಟಾಲ್ ಮಾಡಲು ಶಿಫಾರಸ್ಸು ಮಾಡಿದೆ. ಸಂದೇಶಗಳು, ಫೋಟೋಗಳು, ಆಡಿಯೊ ದಾಖಲೆಗಳು ಮತ್ತು ಕರೆ ಇತಿಹಾಸದಂತಹ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಅಪ್ಲಿಕೇಶನ್ ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಮೊಬೈಲ್‌ ನಲ್ಲಿರುವ ಸಂದೇಶಗಳು, ಫೋಟೋಗಳು, ಆಡಿಯೊ ದಾಖಲೆಗಳು ಮತ್ತು ಕರೆ ಇತಿಹಾಸದಂತಹ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಅಪ್ಲಿಕೇಶನ್ ಪ್ರಯತ್ನಿಸಿದೆ ಎನ್ನಲಾಗಿದೆ. ಆದರೆ ಈಕುರಿತು ಸ್ಲೈಸ್‌ ಕಂಪನಿಯು ಸಮಸ್ಯೆಯನ್ನು ಪರಿಹರಿಸಿದೆ ಎಂದು ಹೇಳಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!