ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ನಲ್ಲಿ ಏರ್ಪಟ್ಟಿದ್ದ ಉದ್ವಿಗ್ನ ವಾತಾವರಣ ತಾತ್ಕಾಲಿಕವಾಗಿ ಶಮನವಾಗಿದ್ದು, ಸದ್ಯ ಪೂರ್ವ ಗಡಿಯಲ್ಲಿ ಕದನವಿರಾಮ ಘೋಷಿಸಲು ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳು ಒಪ್ಪಿಗೆ ನೀಡಿವೆ.
ಗಡಿ ಸಂಘರ್ಷ ತಿಳಿಗೊಳಿಸುವ ಪ್ರಯತ್ನವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ಸಲಹೆಯಂತೆ ಪ್ಯಾರಿಸ್‌ನಲ್ಲಿ ಉಕ್ರೇನ್ ಹಾಗೂ ರಷ್ಯಾ ದೇಶದ ರಾಜತಾಂತ್ರಿಕರ ಸಭೆ ನಡೆಯಿತು. ಈ ವೇಳೆ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.
ಉಕ್ರೇನ್ ಪೂರ್ವದ ಗಡಿ ಸಮೀಪ ರಷ್ಯಾದ ಪಡೆಗಳ ನಿಯೋಜನೆ ಆಗಿದ್ದರಿಂದ ಯುದ್ಧ ವಾತಾವರಣ ನಿರ್ಮಾಣವಾಗಿತ್ತು. ದಾಳಿ ನಡೆದರೆ, ಪ್ರತಿದಾಳಿಗಾಗಿ ಅಮೆರಿಕ ಹಾಗೂ ನ್ಯಾಟೋ ಪಡೆಗಳು ಸಿದ್ಧ ಆಗಿದ್ದವು.
ಈ ಮಧ್ಯೆ ಜರ್ಮನಿ ಹಾಗೂ ಫ್ರಾನ್ಸ್‌ನ ಮಧ್ಯಸ್ಥಿಕೆಯೊಂದಿಗೆ ಮಾತುಕತೆ ನಡೆದಿದ್ದು, ಫಲದಾಯಕವಾಗಿದೆ. ಮುಂದಿನ ತಿಂಗಳು ಜರ್ಮನಿಯ ಬರ್ಲಿನ್‌ನಲ್ಲಿ ಗಡಿ ವಿವಾದದ ಬಗ್ಗೆ ಮಾತುಕತೆ ನಡೆಯಲಿದೆ.