spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಮ್ಮ ಸೇನೆ, ನಮ್ಮ ಹೆಮ್ಮೆ: ರಸ್ತೆಗಳನ್ನಷ್ಟೇ ಅಲ್ಲ, ಮಕ್ಕಳ ಭವಿಷ್ಯವನ್ನೂ ಕೆತ್ತುತ್ತಿದ್ದಾರೆ!

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉಸಿರಾಡುವುದಕ್ಕೆ ಆಮ್ಲಜನಕದ ಲಭ್ಯತೆಯೂ ಅಷ್ಟು ಸರಾಗವಲ್ಲದ  ಅತಿ ಎತ್ತರದ ಬೆಟ್ಟಗಳ ಮೇಲೆ ರಸ್ತೆ-ಸುರಂಗಗಳನ್ನು ನಿರ್ಮಿಸುವ ಕೆಲಸ ಎಲ್ಲರ ಸಾಮರ್ಥ್ಯಕ್ಕೆ ಒಗ್ಗುವಂಥದ್ದಲ್ಲ. ಆದರೆ ನಮ್ಮ ಸೇನೆಯ ‘ಬಾರ್ಡರ್ ರೋಡ್ ಆರ್ಗನೈಸೇಷನ್’ ಅಂಥ ಸವಾಲಿನ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಂತೂ ಗಡಿ ಪ್ರದೇಶದಲ್ಲಿ ಸಂಪರ್ಕ ಮೂಲಸೌಕರ್ಯಗಳ ಕ್ರಾಂತಿಯೇ ಆಗಿದೆ. ಇವತ್ತು ಲಢಾಕಿನಲ್ಲಿ ಸಂಘರ್ಷ ತೆರೆದುಕೊಂಡಾಗಲೆಲ್ಲ ಚೀನಾದ ಮಹಾಸೈನ್ಯದೆದುರು ಭಾರತೀಯ ಸೇನೆ ಕದಲದಂತೆ ನಿಲ್ಲುವುದಕ್ಕೆ ಮುಖ್ಯ ಕಾರಣ ಈ ಹಿಂದೆ ಗಸ್ತು ತಿರುಗುವುದಕ್ಕೇ ದುರ್ಗಮವಾಗಿದ್ದ ಪ್ರದೇಶಗಳಿಗೂ ಸರಾಗವಾಗಿ ಪೂರೈಕೆಗಳು ತಲುಪುವಂತೆ ಬಾರ್ಡರ್ ರೋಡ್ ಆರ್ಗನೈಸೇಷನ್ ರಸ್ತೆ ನಿರ್ಮಿಸಿರುವುದು.

ಆದರೆ, ಇಲ್ಲಿ ಹೇಳಹೊರಟಿರುವುದು ರಸ್ತೆಗಳ ಕತೆ ಅಲ್ಲ. ಹೀಗೆಲ್ಲ ರಸ್ತೆಗಳನ್ನು ನಿರ್ಮಾಣ ಮಾಡುವಾಗ ಸೇನೆಯು ದೇಶದ ಬೇರೆ ಬೇರೆ ಭಾಗಗಳಿಂದ ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇವರು ಜಾರ್ಖಂಡ, ಬಿಹಾರ ಿತ್ಯಾದಿ ರಾಜ್ಯಗಳಿಂದಲೇ ಹೆಚ್ಚಾಗಿ ಬರುತ್ತಾರೆ. ಬೇರೆ ನಗರ-ಹಳ್ಳಿಗಳಲ್ಲಿ ರಸ್ತೆ ಮಾಡಿದ್ದಕ್ಕಿಂತ ಹೆಚ್ಚಿನ ಶ್ರಮ ಮತ್ತು ಸಮಯಗಳನ್ನು ಬೇಡುವ ಕೆಲಸ ಇದು. ಹಾಗೆಂದೇ ಈ ಕಾರ್ಮಿಕರು ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ವರ್ಷಗಟ್ಟಲೇ ತಂಗಬೇಕಾಗುತ್ತದೆ. 

ಹೀಗೆ ಬರುವ ಕಾರ್ಮಿಕರಿಗೆ ತಮ್ಮ ಮಕ್ಕಳನ್ನು ಹಳ್ಳಿಯಲ್ಲೇ ಬಿಟ್ಟುಬರುವ ಸ್ಥಿತಿವಂತಿಕೆ ಏನಿಲ್ಲ. ತಾವೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಮಕ್ಕಳನ್ನು ಕಟ್ಟಿಕೊಂಡು ಸಾಗುವುದು ಸಾಮಾನ್ಯ. ಬಹುಶಃ ಈ ಮಕ್ಕಳು ಇನ್ಯಾವುದೋ ನಿರ್ಮಾಣ ಪ್ರದೇಶದಲ್ಲಿ ದುಡಿಯುತ್ತಿದ್ದರೆ ಜಲ್ಲಿಕಲ್ಲುಗಳ ಮೇಲೆ ಮಲಗುವ ಪ್ರಪಂಚ ಬಿಟ್ಟರೆ ಮತ್ತೇನೂ ಸಿಗುತ್ತಿರಲಿಲ್ಲ.

ಆದರೆ, ಭಾರತೀಯ ಸೇನೆಯ ನಿಗಾದಲ್ಲಿದ್ದಾರೆಂದರೆ ಅವರು ಅಂಥ ಭರವಸೆರಹಿತ ಬದುಕನ್ನು ಕಳೆಯಲು ಹೇಗೆ ಸಾಧ್ಯ? ಇರುವ ಜಾಗದಲ್ಲೇ ಈ ಎಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮತ್ತು ಶಿಕ್ಷಣವನ್ನು ಕೊಡುವ ಕೆಲಸ ಮಾಡುತ್ತಿದೆ ಬಾರ್ಡರ್ ರೋಡ್ ಆರ್ಗನೈಸೇಷನ್. 

ಉತ್ತರಾಖಂಡದಲ್ಲಿ ಧರಾಸು-ಗಂಗೋತ್ರಿ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇಲ್ಲಿನ 70 ಮಕ್ಕಳಿಗೆ ಮೂರು ಶಿಬಿರಗಳ ಮೂಲಕ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ ರಸ್ತೆಯ ಉಸ್ತುವಾರಿ ಹೊತ್ತಿರುವ ಸೇನೆಯ ಅಧಿಕಾರಿಗಳು. ಗೂಂಜ್ ಎಂಬ ಸ್ವಯಂಸೇವಾ ಸಂಸ್ಥೆ ಮೂಲಕ ಈ ಮಕ್ಕಳಿಗೆ ಬಟ್ಟೆ ಮತ್ತು ಪಡಿತರಗಳೂ ಸಿಗುತ್ತಿವೆ. ಸೇನೆಯಲ್ಲಿರುವವರೇ ಈ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ರಸ್ತೆ ಪಕ್ಕದಲ್ಲೋ, ಬೆಟ್ಟದ ಬದಿಯಲ್ಲೋ ಇರುವ ಜಾಗದಲ್ಲೇ ಅವಕಾಶ ಮಾಡಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸುತ್ತಿದ್ದಾರೆ ನಮ್ಮ ಸೈನಿಕರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss