ಡೇರಿಂಗ್‌ ಡಾಗ್:‌ ಎರಡು ಬುಲೆಟ್‌ ಹೊಕ್ಕರೂ ಉಗ್ರರ ಬೆವರಿಳಿಸಿದ ʻಜೂಮ್‌ʼ ಶ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಸೇನಾ ಶ್ವಾನ ಕೆಚ್ಚೆದೆಯ ಹೋರಾಟವನ್ನು ನಡೆಸಿತು. ಭಯೋತ್ಪಾದಕರ ಜಾಡನ್ನು ಪತ್ತೆ ಹಚ್ಚುವ ಯತ್ನದಲ್ಲಿ ಎರಡು ಗುಂಡುಗಳು ತಗುಲಿದ್ದರೂ ಸೇನಾ ಅಧಿಕಾರಿಗಳು ನೀಡಿದ ಕಾರ್ಯಾಚರಣೆಯನ್ನು ಮುಗಿಸಿ ಶೆಹಬ್ಬಾಸ್‌ ಎನಿಸಿಕೊಂಡಿದೆ. ಗಂಭೀರವಾಗಿ ಗಾಯಗೊಂಡ ʻಜೂಮ್‌ʼ ಶ್ವಾನವನ್ನು ಶ್ರೀನಗರದ ಮಿಲಿಟರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ʻಜೂಮ್‌ʼ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮನೆಯೊಂದರಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಭಾನುವಾರ ತಡರಾತ್ರಿ ಮಾಹಿತಿ ಪಡೆದ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸೋಮವಾರ ಬೆಳಗ್ಗೆ ‘ಆಪರೇಷನ್ ತಂಗಪಾವ’ ಹೆಸರಿನಲ್ಲಿ ಉಗ್ರರನ್ನು ಸದೆಬಡಿಯಲು ಆರಂಭಿಸಿದ್ದರು. ಆದರೆ ಉಗ್ರರು ಇರುವ ಸ್ಥಳವನ್ನು ನಿಖರವಾಗಿ ಗುರುತಿಸುವುದಕ್ಕಾಗಿ ಆರ್ಮಿ ‘ಜೂಮ್’ ಅನ್ನು ಅಖಾಡಕ್ಕಿಳಿಸದೆ. ಇದು ನೇರವಾಗಿ ಭಯೋತ್ಪಾದಕರ ಅವಿತಿದ್ದ ಬಳಿ ನುಗ್ಗಿದೆ ಈ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಎರಡು ಗುಂಡುಗಳು ಜೂಮ್‌ಗೆ ತಾಗಿವೆ. ಆದರೂ, ಭಯೋತ್ಪಾದಕರು ಪಲಾಯನ ಮಾಡುವುದನ್ನು ತಡೆದು ಸೇನೆಗೆ ಸಹಾಯ ಮಾಡಿದೆ. ಮನೆಯಲ್ಲಿಡಗಿದ್ದ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ಜೂಮ್.

ಚಿನಾರ್ ಕಾರ್ಪ್ಸ್ – ಇಂಡಿಯನ್ ಆರ್ಮಿ ಹೆಸರಿನ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಜೂಮ್ ಹೆಚ್ಚು ತರಬೇತಿ ಪಡೆದ ಶ್ವಾನ. ತುಂಬಾ ಭೀಕರವಾಗಿ ದಾಳಿ ಮಾಡುವ ತಾಕತ್ತಿದೆ. ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸಿ ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!