ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಶ್ಮೀರದಲ್ಲಿ ಕುಪ್ವಾರಾ ಪೋಲೀಸ್‌ ಮತ್ತು ಭಾರತೀಯ ಸೇನೆಯು ಜಂಟಿಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಖಚಿತ ಮಾಹಿತಿಯ ಮೇರೆಗೆ ತಾದ್‌ ಕರ್ನಾದ ಹಜಾಮ್‌ ಮೊಹಲ್ಲಾದಲ್ಲಿ ಶೋಧಕಾರ್ಯಾಚರಣೆ ನಡೆಸಿದ ಯೋಧರು 10 ಪಿಸ್ತೂಲ್‌ಗಳು, 17 ಪಿಸ್ತೂಲ್ ಮ್ಯಾಗಜೀನ್‌ಗಳು, 54 ಪಿಸ್ತೂಲ್ ಸುತ್ತುಗಳು ಮತ್ತು ಐದು ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಾಶ್ಮೀರ ಝೋನ್‌ ಪೋಲೀಸರು ಹೆಚ್ಚಿನ ಶೋಧ ಕಾರ್ಯ ಕೈಗೊಂಡಿದ್ದು ತನಿಖೆ ಆರಂಭಿಸಲಾಗಿದೆ.

ಕಳೆದ ತಿಂಗಳು ಜಾರಿ ನಿರ್ದೇಶನಾಲಯವು ಶಸ್ತ್ರಾಸ್ತ್ರ ವಿತರಕರು ಮತ್ತು ಕಾಶ್ಮೀರ ಸರ್ಕಾರ ಮತ್ತು ಅಧಿಕಾರಿಗಳ ನಡುವೆ ಸಂಭಂಧಗಳನ್ನು ವಿವರಿಸುವ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೇ ಮಾರ್ಚ್ 24 ರಂದು ಜಮ್ಮು ಮತ್ತು ಕಾಶ್ಮೀರದಾದ್ಯಂತ ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ನಿವೃತ್ತ ಮತ್ತು ಸೇವೆಯಲ್ಲಿರುವ ಅಧಿಕಾರಿಗಳು,ಮತ್ತು ಶಸ್ತ್ರಾಸ್ತ್ರ ವಿತರಕರ ಆವರಣದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!