Wednesday, June 29, 2022

Latest Posts

ಸೇನಾ ಹೆಲಿಕಾಪ್ಟರ್​​ ದುರಂತ: ಬದುಕುಳಿದ ಕ್ಯಾ. ವರುಣ್​​ ಸಿಂಗ್​​ ಸ್ಥಿತಿ ಚಿಂತಾಜನಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್​​ ದುರಂತದಲ್ಲಿ ಐಎಎಫ್​​ ಗ್ರೂಪ್ ಕ್ಯಾಪ್ಟನ್​​ ವರುಣ್​​ ಸಿಂಗ್​​ ಬದುಕುಳಿದಿದ್ದು, ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನ ತಮಿಳುನಾಡಿನ ವೆಲ್ಲಿಂಗ್ಟನ್​​ ಆಸ್ಪತ್ರೆಯಿಂದ ಬೆಂಗಳೂರಿಗೆ ಶಿಫ್ಟ್​ ಮಾಡಲಾಗ್ತಿದೆ.
ನಿನ್ನೆ ನಡೆದ ದುರಂತದಲ್ಲಿ ಸೇನಾ ಮುಖಂಡ ಬಿಪಿನ್​ ರಾವತ್​​ ಅವರ ಪತ್ನಿ ಸೇರಿದಂತೆ 13 ಮಂದಿ ದುರ್ಮರಣಕ್ಕೀಡಾಗಿದ್ದು, ಕ್ಯಾಪ್ಟನ್​ ವರುಣ್​ ಸಿಂಗ್ ಬದುಕುಳಿದಿದ್ದಾರೆ. ಈಗಾಗಲೇ ತಮಿಳುನಾಡಿನ ವೆಲ್ಲಿಂಗ್ಟನ್​​ ಮಿಲಿಟರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗ್ತಿದೆ.
ಲೈಫ್​​ ಸಪೋರ್ಟ್​​ ವ್ಯವಸ್ಥೆಯಲ್ಲಿರುವ ವರುಣ್​ ಸಿಂಗ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಮುಂದಿನ 48 ಗಂಟೆಗಳ ಅವಧಿ ನೀಡಿದ್ದಾರೆ. ಇದರ ಬೆನ್ನಲ್ಲೇ ಅವರನ್ನ ಬೆಂಗಳೂರಿನ ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss