spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಿಂಘು ಗಡಿಯಲ್ಲಿ 10-15 ಸಾವಿರ ರೈತರ ಪ್ರತಿಭಟನೆ: ಮತ್ತೆ ರಾಷ್ಟ್ರರಾಜಧಾನಿಗೆ ಮುತ್ತಿ ಹಾಕುತ್ತಾರಾ ಪ್ರತಿಭಟನಾನಿರತರು?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ 10-15 ಸಾವಿರ ರೈತರು ಬೀಡು ಬಿಟ್ಟಿದ್ದು, ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ತಾತ್ಕಾಲಿಕ ಟೆಂಟ್ ಹಾಗೂ ಗುಡಿಸಲಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ವರದಿ ತಿಳಿಸಿದೆ.
ಗುರುವಾರ ಸಿಂಘು ಗಡಿಯಲ್ಲಿಯಲ್ಲಿ ಕಾರ್ಯನಿರತರಾಗಿದ್ದ ಇಬ್ಬರು ಪೊಲೀಸರ ಮೇಲೆ ರೈತರು ಹಲ್ಲೆ ನಡೆಸಿರುವುದು ವರದಿಯಾಗಿತ್ತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ವಿಶೇಷ ಪೊಲೀಸ್ ತಂಡ ಗಡಿಯಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಸ್ಥಿತಿಗತಿಗಳನ್ನು ಪರಿಶೀಲಿಸಿದೆ.
ಈ ವೇಳೆ ಗಡಿಯಲ್ಲಿನ ಟೆಂಟ್ ಗಳಲ್ಲಿಯೇ ಏರ್ ಕೂಲರ್, ಫ್ರಿಡ್ಜ್, ನೀರು ಶುದ್ದೀಕರಣ ಯಂತ್ರಗಳನ್ನು ಹಾಕಿಸಿಕೊಂಡಿರುವ ರೈತರು, ಪ್ರತಿಭಟನೆ ಮುಂದುವರೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಹರ್ಯಾಣ, ಉತ್ತರಪ್ರದೇಶದಿಂದ ಬರೋಬ್ಬರಿ 50 ಸಾವಿರ ರೈತರು ರಾಷ್ಟ್ರರಾಜಧಾನಿ ದೆಹಲಿ ಪ್ರವೇಶಿಸುವ ಸೂಚನೆಯಿದೆ. ಈ ನಿಟ್ಟಿನಲ್ಲಿ ಸಿಂಘು, ತಕ್ರಿ ಹಾಗೂ ಘಾಜಿಪುರ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss