Sunday, August 14, 2022

Latest Posts

ಹಾನಿಕಾರಕ, ಹಿಂಸಾತ್ಮಕ ಸಂದೇಶ ರವಾನೆ: 20 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆ ಬ್ಯಾನ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನೂತನ ನಿಯಮಗಳ ಅನ್ವಯ ದೇಶದಲ್ಲಿ ಒಂದೇ ತಿಂಗಳಿನಲ್ಲಿ 20 ಲಕ್ಷಕ್ಕೂ ಅಧಿಕ ವಾಟ್ಸ್ಯಾಪ್ ಖಾತೆಗಳನ್ನು ನಿಷೇಧಿಸಲಾಗಿದೆ.
ಮೇ.15 ರಿಂದ ಜೂ.15 ಅವಧಿಯಲ್ಲಿಯೇ 20 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 345  ದೂರುಗಳನ್ನು ದಾಖಲಿಸಲಾಗಿದೆ. ಹಾನಿಕಾರಕ ಅಥವಾ ಹಿಂಸಾತ್ಮಕ ಅಂಶವುಳ್ಳ ಸಂದೇಶಗಳನ್ನು ರವಾನಿಸುವ ವಾಟ್ಸಾಪ್ ಖಾತೆಗಳನ್ನು ಗುರುತಿಸಿ ರದ್ದು ಮಾಡಲಾಗುತ್ತಿದೆ. ಇಂತಹ ಖಾತೆಗಳನ್ನು ಗುರುತಿಸಲು ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ 345 ದೂರು ದಾಖಲಾಗಿದ್ದು,63 ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸಾಪ್ ಮಾಹಿತಿ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss