ಹೊಸದಿಗಂತ ಆನ್ಲೈನ್ ಡೆಸ್ಕ್:
ವಿಶ್ವಾದ್ಯಂತ ಕೊರೋನಾ ಮನೆಮಾಡಿದ್ದು, ಬ್ರೆಜಿಲ್ನಲ್ಲಿ ಒಂದೇ ದಿನದಲ್ಲಿ ಮೂರು ಸಾವಿರ ಜನರು ಮೃತಪಟ್ಟಿದ್ದಾರೆ.
ಕೊರೋನಾ ಸೋಂಕಿಗೆ 3,808 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3,58,425ಗೆ ಏರಿದೆ.
ಕಳೆದ 7 ದಿನಗಳಲ್ಲಿ ದೈನಂದಿನ ಸರಾಸರಿ 3,068 ಸಾವುಗಳು ವರದಿಯಾಗಿದ್ದು, ಆರೋಗ್ಯ ಕಾರ್ಯದರ್ಶಿಗಳ ಪ್ರಕಾರ ಅಮೆರಿಕ ನಂತರ ಬ್ರೆಜಿಲ್ ವಿಶ್ವದ ಎರಡನೇ ಅತಿದೊಡ್ಡ ಸಾಂಕ್ರಾಮಿಕ ಸಾವಿನ ಸಂಖ್ಯೆಯನ್ನು ದಾಖಲು ಮಾಡಿದ ರಾಷ್ಟ್ರವಾಗಿದೆ.