ಜಲ್ಲಿಕಟ್ಟು ಸ್ಪರ್ಧೆ ಅವಾಂತರ: ಸುಮಾರು 60 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕರ ಸಂಕ್ರಾಂತಿ ಹಿನ್ನೆಲೆ ತಮಿಳುನಾಡಿನ ಅವನಿಯಪುರಂನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಸುಮಾರು 60 ಮಂದಿ ಗಾಯಗೊಂಡಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಹಿರಿಯ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.
60 ಜನರಲ್ಲಿ 20 ಜನರು ಸ್ವಲ್ಪ ಗಂಭೀರವಾಗಿದ್ದು ಮತ್ತು ರಾಜಾಜಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಇತರ 40 ಜನರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಮಧುರೈ ಜಿಲ್ಲಾಧಿಕಾರಿ ಅನೀಶ್ ಶೇಖರ್ ಹೇಳಿದ್ದಾರೆ.

ಘಟನೆಯ ಹೊರತಾಗಿಯೂ, ನಡೆಯುತ್ತಿರುವ ಜಲ್ಲಿಕಟ್ಟು ಕಾರ್ಯಕ್ರಮವು ನಿನ್ನೆ ಸಂಜೆ 4 ಗಂಟೆಯವರೆಗೆ ಮುಂದುವರೆದಿದೆ.
ತಮಿಳುನಾಡಿನ ಮಧುರೈನ ಮೂರು ಗ್ರಾಮಗಳಲ್ಲಿ ‘ಏರು ತಝುವುತಲ್’ ಮತ್ತು ‘ಮಂಚುವಿರಾಟ್ಟು’ ಎಂದೂ ಕರೆಯಲ್ಪಡುವ ಜಲ್ಲಿಕಟ್ಟು ಭಾನುವಾರದಂದು ಅದ್ಧೂರಿಯಾಗಿ ಆರಂಭವಾಯಿತು.

ಇದು ಸ್ಥಳೀಯ ಗೂಳಿ ಪಳಗಿಸುವ ಕ್ರೀಡೆಯಾಗಿದ್ದು, ಇದರಲ್ಲಿ ಭಾಗವಹಿಸುವವರು ಗೂಳಿಯನ್ನು ಕೊಂಬಿನಿಂದ ಹಿಡಿದು ಪಳಗಿಸಲು ಪ್ರಯತ್ನಿಸುತ್ತಾರೆ.  ಸೋಮವಾರ ಮತ್ತು ಮಂಗಳವಾರ ಪಾಲಮೇಡು ಮತ್ತು ಅಲಂಗನಲ್ಲೂರಿನಲ್ಲಿ ಮತ್ತಷ್ಟು ಜಲ್ಲಿಕಟ್ಟು ಕಾರ್ಯಕ್ರಮಗಳು ನಡೆಯಲಿವೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಗೂಳಿ ಪಳಗಿಸುವವರು 300ಮಂದಿ ಮತ್ತು 150 ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!