spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರೆಮ್ಡಿಸಿವಿರ್ ಔಷಧ ಅಕ್ರಮಮಾರಾಟ ಮಾಡುತ್ತಿದ್ದ 9 ಜನರ ಬಂಧನ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ದಿಗಂತ ವರದಿ ವಿಜಯಪುರ:

ನಗರದ ಬಾಂಗಿ, ಬಂಜಾರಾ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ನೀಡುವ ರೆಮ್ಡಿಸಿವಿರ್ ಔಷಧವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ರಾಜೇಸಾಬ್ ಬಾಬು ಹತ್ತರಕಿಹಾಳ, ಇಮ್ತಿಯಾಜ್ ಹುಸೇನಸಾಬ್ ಮಟ್ಟಿ, ಶಿವಕುಮಾರ್ ಸಿದ್ದಗೊಂಡ ಮದರಿ, ಮೌಲಾಲಿ ರಜಾಕಸಾಬ್ ಹತ್ತರಕಾಳ, ಸೈಯದ್ ಮೌಲಾಸಾಬ್ ಆಹೇರಿ, ಜಕಪ್ಪ ಮಲಕಾರಿ ತಡ್ಲಗಿ, ಸಂಜೀವ ನರಸಿಂಹ ಜೋಶಿ, ಯಲ್ಲಮ್ಮ ಕನ್ನಾಳ, ಸುರೇಖಾ ಗಾಯಕವಾಡ ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ಈ ಆರೋಪಿಗಳಿಂದ ರೆಮ್ಡಿಸಿವಿರ್ 3 ಬಾಟಲ್, 24 ರೆಮಿಡಿಸಿವರ್ ಖಾಲಿ ಬಾಟಲ್ ಗಳು ಹಾಗೂ 64 ಸಾವಿರ ನಗದು ಸೇರಿ 7 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss