ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶರ್ಟ್ ಕಳಚಿ ಕಾರಿನ ಮೇಲೆ ಹತ್ತಿ ಸಾಹಸ ಪ್ರದರ್ಶಿಸಿದ ಯುವಕನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಂಡ ಘಟನೆ ಗಾಜಿಯಾಬಾದ್‌ನ ಮುರಾದ್‌ನಗರದಲ್ಲಿ ನಡೆದಿದೆ.
ಮಾರ್ಚ್ 12 ರಂದು ಈ ಘಟನೆ ನಡೆದಿದ್ದು, ಈತನ ಕೃತ್ಯದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರ ಪ್ರಕಾರ ಆರೋಪಿಯನ್ನು ಜಿಲ್ಲೆಯ ರೌಲಿ ಕಲಾನ್ ಗ್ರಾಮದ ನಿವಾಸಿ ಡ್ಯಾನಿಶ್ ಎಂದು ಗುರುತಿಸಲಾಗಿದೆ.
ಗಾಜಿಯಾಬಾದ್‌ನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಪೊಲೀಸರು ಇಂತಹ ಪ್ರಕರಣಗಳಲ್ಲಿ ಯುವಕರನ್ನು ಬಂಧಿಸಿ ಅವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.