ಅಸ್ಸಾಂನಲ್ಲಿ ನಿಷೇಧಿತ ಉಗ್ರ ಸಂಘಟನೆಗೆ ಸೇರಲು ಯತ್ನಿಸಿದ ಯುವಕನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನಿಷೇಧಿತ ಸಂಘಟನೆಯಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ಗೆ ಸೇರಲು ಯತ್ನಿಸಿದ ಆರೋಪದ ಮೇಲೆ 21 ವರ್ಷ ಯುವಕನನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.
ಯುವಕನನ್ನು ಬೊಂಗೈಗಾಂವ್ ಜಿಲ್ಲೆಯ ರಾಖಲ್ದುಬಿ ಬಳಿಯ ಡೌಕಿಜರ್‌ನ ಡೇವಿಡ್ ಬರ್ಮನ್ (21) ಎಂದು ಗುರುತಿಸಲಾಗಿದೆ.
ಡೇವಿಡ್ ಬರ್ಮನ್ ವಿರುದ್ಧ ಪೊಲೀಸರು ಈಗಾಗಲೇ 242/22 ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಿಲೀಪ್ ಮತ್ತು ಜನ್ಮನಿ ಬರ್ಮನ್ ಅವರನ್ನು ಡೇವಿಡ್ ಪೋಷಕರು ಎಂದು ಗುರುತಿಸಲಾಗಿದೆ.
ಈ ಕುರಿತು ಪೋಲೀಸ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು ”ಕಳೆದ ಕೆಲವು ದಿನಗಳಿಂದ ಯುವಕನ ಮೇಲೆ ಅನುಮಾನವಿತ್ತು. ನಾವು ಆತನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸ್ಕ್ಯಾನ್ ಮಾಡಿದ್ದೇವೆ ಮತ್ತು ಕೆಲವು ಅನುಮಾನಾಸ್ಪದ ಚಟುವಟಿಕೆಗಳನ್ನು ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿಯ ಕೌನ್ಸೆಲಿಂಗ್ ಮಾಡಿದ್ದೇವೆ. ಅವರು ಉಲ್ಫಾ(I) ಗೆ ಸೇರುವ ಇಚ್ಛೆಯ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ” ಎಂದಿದ್ದಾರೆ.

ಅಸ್ಸಾಂ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!