Friday, July 1, 2022

Latest Posts

ಮೋಜು ಮಸ್ತಿಗಾಗಿ ಪಿಗ್ಮಿ ಕಲೆಕ್ಟರ್ ಗಳನ್ನ ದರೋಡೆ ನಡೆಸುತ್ತಿದ್ದ ಐವರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ,ಮೈಸೂರು:

ಮೋಜು ಮಸ್ತಿಗಾಗಿ ದರೋಡೆ ನಡೆಸುತ್ತಿದ್ದ ಐವರು ಆರೋಪಿಗಳಳನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದ ಸಲೀಂ ಪಾಷ(25),ಫಾಜಿಲ್ ಖಾನ್ ಹಾಗೂ ಬೆಂಗಳೂರಿನ ಸೈಯದ್ ರಿಯಾಜ್(30),ಸೈಫ್ ಆಲಿ(25) ಹಾಗೂ ಸೈಯದ್ ನಯಾಜ್(36) ಬಂಧಿತರು. ಇವರುಗಳಿಂದ 43,500 ನಗದು,ಕೃತ್ಯಕ್ಕೆ ಬಳಸುತ್ತಿದ್ದ ಡ್ರಾಗರ್,ದೊಣ್ಣೆ,ಎರಡು ಬೈಕ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸಂಚು ನಡೆಸಿ ಉದಯಗಿರಿ ಹಾಗೂ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಗ್ಮಿ ಕಲೆಕ್ಟರ್ ಗಳನ್ನ ಟಾರ್ಗೆಟ್ ಮಾಡಿ ಡ್ರಾಗರ್ ತೋರಿಸಿ, ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು.ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಹಾಗೂ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದರೋಡೆ ನಡೆಸಿದ್ದ ಆರೋಪಿಗಳು, ಮತ್ತಷ್ಟು ದರೋಡೆಗೆ ಸ್ಕೆಚ್ ಹಾಕಿದ್ದರು.ಬೆಂಗಳೂರಿನಿoದ ಬಂದ ಮೂವರು ಆರೋಪಿಗಳು ಮೈಸೂರಿನ ಇಬ್ಬರು ಆರೋಪಿಗಳ ಜೊತೆ ಸೇರಿ ಕೃತ್ಯವೆಸಗಿದ್ದರು.
ಖಚಿತ ಮಾಹಿತಿ ಮೇರೆಗೆ ಉದಯಗಿರಿ ಠಾಣೆಯ ಪೊಲೀಸರು ಕಾರ್ಯಚರಣೆ ನಡೆಸಿ, ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆ ಪಡೆದು ಸಂಚು ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಗೀತಾ ಪ್ರಸನ್ನ,ದೇವರಾಜ ವಿಭಾಗದ ಎಸಿಪಿ ಶಶಿಧರ್ ಮಾರ್ಗದರ್ಶನದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿ.ಕೆ.ರಾಜು,ಎಸೈಗಳಾದ ಸುನಿಲ್,ನಾಗರಾಜ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಶಂಕರ್,ಸಿದ್ದೀಖ್ ಅಹ್ಮದ್,ಸೋಮಶೇಖರ್,ಮೋಹನ್ ಕುಮಾರ್,ಶಿವರಾಜಪ್ಪ,ಸಿಡಿಆರ್ ಸೆಲ್ ನ ಕುಮಾರ್ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss