ಮುನಿರತ್ನ ಅರೆಸ್ಟ್, ಬಿಜೆಪಿ ನಾಯಕರು ಕೆಂಡಾಮಂಡಲ.. ಸರ್ಕಾರದ ವಿರುದ್ಧ ಅಶ್ವಥ್‌ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಸಕ ಮುನಿರತ್ನ ಬಂಧನವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನ ಪಾಲನೆಯಾಗುತ್ತಿಲ್ಲ ಎಂದು ಅಶ್ವಥ್‌ ನಾರಾಯಣ್, ರವಿಕುಮಾರ್, ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಕಾನೂನಿಗಿಂತ ಯಾರೂ ದೊಡ್ಡವರು ಅಲ್ಲ. ವಂಚನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಈ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ? ಎಂದು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿನ ಶಾಸಕ, ಶಾಸಕನ ಮಗನ ಬಂಧನ ಆಗಿದೆಯಾ? ಶಿವಮೊಗ್ಗದಲ್ಲಿ ಹತ್ಯೆ ಆಗಿದೆ, ಕ್ರಮ ಆಗಿದೆಯಾ? ಎಂದು ಸರಣಿ ಪ್ರಶ್ನೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!