ಕಲಬುರಗಿ ಪಾಲಿಕೆ ಆಯುಕ್ತ ಶಂಕ್ರಣ್ಣಾ ವಣಿಕ್ಯಾಳ ಬಂಧನ

ಹೊಸದಿಗಂತ ವರದಿ,ಕಲಬುರಗಿ :

ಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಶಂಕ್ರಣ್ಣಾ ವಣಿಕ್ಯಾಳ ಅವರನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧನ ಮಾಡಿದ್ದಾರೆ. ಇವರ ಜೊತೆ ಜೊತೆಗೆ ಪಾಲಿಕೆಯ ಅಕೌಂಟೆಂಟ್ ಆಗಿರುವ ಚೆನ್ನಪ್ಪಾ ಅವರನ್ನು ಬಂಧನ ಮಾಡಲಾಗಿದೆ.

ಪಾಲಿಕೆ ಆಯುಕ್ತ ಶಂಕ್ರಣ್ಣಾ ವಣಿಕ್ಯಾಳ ಅವರ ಕಮೀಷನ್ ಹಣವನ್ನು ಅಕೌಂಟೆಂಟ್ ಚನ್ನಪ್ಪಾ ಕಲೇಕ್ಷನ ಮಾಡುತ್ತಿದ್ದನು.ಯಾವುದೇ ಬಿಲ್ ಪಾಸ್ ಆಗಬೇಕಾದರೆ ಎರಡು ಪಸೇ೯ಂಟೆಜ್ ಕಮೀಷನ್ ಕೊಡಲೆಬೇಕು ಎಂದು ಚೆನ್ನಪ್ಪಾ ಹೇಳುತ್ತಿದ್ದನು.

ಎರಡು ಪಸೇ೯ಂಟೆಜ್ ಕಮೀಷನ್ ಕೊಟ್ಟಾಗ ಮಾತ್ರ ಬಿಲ್ ಪಾಸ್ ಆಗುತ್ತಿತ್ತು.ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿಯೊಂದು ಬಿಲ್ ಗಳಿಗೆ ಎರಡು ಪಸೇ೯ಂಟೆಜ್ ಕಮೀಷನ್ ,ನನ್ನು ಬಂಧಿತ ಪಾಲಿಕೆ ಆಯುಕ್ತ ಶಂಕ್ರಣ್ಣಾ ವಣಿಕ್ಯಾಳ ಫಿಕ್ಸ್ ಮಾಡಿದ್ದನು ಎಂದು ಎಸಿಬಿ ಮೂಲಗಳಿಂದ ತಿಳಿದುಬಂದಿದೆ.

ಕೋರೋನಾ ಸುರಕ್ಷಾ ಚಕ್ರ ಬಿಲ್ ಪಾಸ್ ಮಾಡುವುದಕ್ಕೂ ಸಹ ಎರಡು ಪಸೇಂಟೆಜ್ ಕಮೀಷನ್, ನ ಬೇಡಿಕೆಯನ್ನು ಇಟ್ಟಿದ್ದನು.ಆ ಎರಡು ಪಸೇಂಟೆಜ್ ಕಮೀಷನ್ ಹಣ 1, 45000 ಹಣ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಅಕೌಂಟೆಂಟ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಎಸಿಬಿ ಬಲೆಗೆ ಬಿದ್ದಾಗ ಪಾಲಿಕೆಯ ಅಕೌಂಟೆಂಟ್ ಚನ್ನಪ್ಪಾ,ನ ಬಳಿ 1ಲಕ್ಷ 45 ಸಾವಿರ ರೂಪಾಯಿ ಲಂಚದ ಹಣ ಇತ್ತು.ಈ ಹಣ ಪಾಲಿಕೆಯ ಆಯುಕ್ತ ಶಂಕ್ರಣ್ಣಾ ವಣಿಕ್ಯಾಳ ಗೆ ಸೇರಬೇಕಾಗಿತ್ತು.

ಹಣ ಕಲೇಕ್ಷನ ಮಾಡಿಕೊಂಡು ಬಳಿಕ ಮನೆಗೆ ತಂದು ಕೊಡಬೇಕು ಎಂದು ಮೊದಲೇ ವಣಿಕ್ಯಾಳ ಸೂಚಿಸಿದ್ದನು. ಎಕಾಏಕಿ ಎಸಿಬಿ ದಾಳಿ ಮಾಡಿದ ಬಳಿಕ ಶಂಕ್ರಣ್ಣಾ ವಣಿಕ್ಯಾಳ ಗೆ ಅಕೌಂಟೆಂಟ್ ಚನ್ನಪ್ಪಾ ಕರೆ ಮಾಡಿದ್ದನು ಎಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಕೋರೋನಾ ಸುರಕ್ಷಾ ಚಕ್ರದ ಬಿಲ್ ಮಾಡಿದ ಕಮೀಷನ್ ಹಣವನ್ನು ಮನೆಗೆ ತಂದು ನೀಡುವಂತೆ ಪಾಲಿಕೆ ಆಯುಕ್ತ ಸೂಚಿಸಿದನು. ಎಸಿಬಿ ಅಧಿಕಾರಿಗಳ ಮುಂದೆಯೇ ವಣಿಕ್ಯಾಳ ಗೆ ಫೋನ ಮಾಡಿದ ಪರಿಣಾಮವಾಗಿ ಲಂಚದಲ್ಲಿ ಇಬ್ಬರು ಭಾಗಿಯಾಗಿರುವ ಕಾರಣಕ್ಕೆ ಇಬ್ಬರನ್ನೂ ಸಹ ಎಸಿಬಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!