ಬಾಗಲಕೋಟೆಯಲ್ಲಿ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಹೊಸದಿಗಂತ ವರದಿ ಬಾಗಲಕೋಟೆ:

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದ ಕಳ್ಳರನ್ನು ಹಿಡಿಯುವಲ್ಲಿ ಶಹರ ಪೊಲೀಸ್ ಠಾಣೆಯವರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆಯ ರಾಮಪ್ಪ ಮಲ್ಲಪ್ಪ ಚವಳಕರ ಮನೆಯಲ್ಲಿ 1,23,000 ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದ ಬಾಗಲಕೋಟೆಯ ಹರಣಶಿಕಾರಿ ಕಾಲೋನಿಯ ಸುನೀಲ ಕಾಳೆ ಮತ್ತು ಶಿಕ್ಕೇರಿಯ ಗೋಪಾಲ ಬಸಪ್ಪ ಬೇಕನಾಳ ಎಂಬ ಆರೋಪಿಗಳನ್ನು ಬಂಧಿಸಿ ಅವರಿಂದ ಕಳ್ಳತನ ಮಾಡಿದ್ದ ಚಿನ್ನಾಭರಣ ವಶಪಡಿಸಿಕೊಂಡು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮನೆಗೆ ಹಾಕಿದ ಕೀಲಿಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಮನೆಯಲ್ಲಿನ ತಿಜೋರಿಯಲ್ಲಿದ್ದ 2 ತೊಲೆ ಬಂಗಾರದ ಸರ, 4 ಗ್ರಾಮ ಬಂಗಾರದ ಉಂಗುರು, ಎರಡೂವರೆ ಗ್ರಾಂದ ಬಂಗಾರದ ಮಾರಟಿಲ್ ಸೇರಿ ಒಟ್ಟು 1,23,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಮನೆಯಿಂದ ನವೆಂಬರ 7ರಂದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಬಾಗಲಕೋಟೆಯ ರಾಮಪ್ಪ ಮಲ್ಲಪ್ಪ ಚವಳಕರ ಅವರು ಬಾಗಲಕೋಟೆಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಕಳುವಾದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ ಮಾರ್ಗದರ್ಶನದಲ್ಲಿ ಶಹರ ಸಿಪಿಐ ಎಂ.ನಾಗರೆಡ್ಡಿ ನೇತೃತ್ವದಲ್ಲಿ ಮಹಿಳಾ ಪಿಎಸ್ಐ ಆರ್.ಎಸ್.ದೊಡ್ಡಮನಿ ಹಾಗೂ ಸಿಬ್ಬಂದಿ ಗಿರೀಶ ಹೊಸಮನಿ, ಯಶವಂತ ಅರಬವ್ವಗೋಳ, ಉಮೇಶ ಚಲವಾದಿ, ಮಹಾಂತೇಶ ಲಮಾಣಿ, ತನಿಖಾ ಸಹಾಯಕ ಎಂ.ಡಿ.ಸವದಿ, ನಾಸೀರ್ ಬೀಳಗಿಯವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!