Wednesday, August 17, 2022

Latest Posts

ಕಾಲೋನಿ ಮನೆಗೆ ನುಗ್ಗಿ ಕಳವು ಮಾಡಿದ ಆರೋಪಿಯ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ/ಕುಶಾಲನಗರ:

ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ನಂಜುಂಡೇಶ್ವರ ಬಡಾವಣೆ ಹಾಗೂ ಆದರ್ಶ ದ್ರಾವಿಡ ಕಾಲೋನಿಯಲ್ಲಿ ಮನೆಗೆ ನುಗ್ಗಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ನಿವಾಸಿ ಕಿರಣ್ ಕುಮಾರ್(22) ಎಂದು ಗುರುತಿಸಲಾಗಿದೆ.
ಕುಶಾಲನಗರ ಟೌನ್ ನ ನಿವಾಸಿಗಳು ತಮ್ಮ ಕೆಲಸಗಳ ನಿಮಿತ್ತ ಮನೆಗೆ ಬೀಗ ಹಾಕಿ ತೆರಳಿದ್ದ ಸಂದರ್ಭ ಆ ಮನೆಗಳ ಬೀಗ ಒಡೆದು ಕಳವು ಮಾಡಿದ ಎರಡು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಕುಶಾಲನಗರ ಮಾರ್ಕೆಟ್ ರಸ್ತೆಯ ಬಳಿ ಗುಮಾನಿ ಮೇಲೆ ಆರೋಪಿಯನ್ನು ಹಿಡಿದು ವಿಚಾರಿಸಿದಾಗ ಎರೆಊ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಯಿಂದ ಹೆಚ್‌ಪಿ ಕಂಪನಿಯ ಎರಡು ಲ್ಯಾಪ್‌ಟಾಪ್ ಗಳು,500 ರೂ ನಗದು, ಒಂದು ಜೊತೆ ಚಿನ್ನದ ಓಲೆ, ಒಂದು ಚಿನ್ನದ ಕೈಬಳೆ, ಒಂದು ಚಿನ್ನದ ಕರಿಮಣಿಸರ,ಒಂದು ಸ್ಯಾಮ್ಸಂಗ್ ಮೊಬೈಲ್ ಫೋನ್, ಒಂದು ವಾಚ್ ನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಬ್ಬಿಣದ ಹಾರೆಯನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಸೋಮವಾಪೇಟೆ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಶ್ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್ , ನೇತೃತ್ವದಲ್ಲಿ ಕುಶಾಲನಗರ ನಗರ ಠಾಣಾಧಿಕಾರಿ ಗಣೇಶ್, ಎಎಸ್ಐ ಗೋಪಾಲ, ಸಿಬ್ಬಂದಿಗಳಾದ ಸುದೀಪ್ ಕುಮಾರ್ , ರಂಜಿತ್ ಹಾಗೂ ಕುಶಾಲನಗರ ಉಪವಿಭಾಗದ ಕರ್ತವ್ಯದ ಸಿಬ್ಬಂದಿಗಳಾದ ಬಿ.ಎಸ್. ದಯಾನಂದ, ಸಜಿ, ಪ್ರಕಾಶ್, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕೊಡಗು ಜಿಲ್ಲೆಯ ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡಬಾರದು ಹಾಗೂ ಹಾಗೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳಬೇಕು. ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 112 ಇಂಡಿಯಾ ಎಂಬ ತಂತ್ರಾಂಶವನ್ನು ತಯಾರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಎಸ್ ಪಿ ಕ್ಷಮಾ ಮಿಶ್ರಾ ಅವರು ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!