Saturday, July 2, 2022

Latest Posts

ಶ್ರೀಗಂಧ ಹಾಗೂ ಬೀಟೆ ನಾಟಾ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಆರೋಪಿ ಬಂಧನ

ದಿಗಂತ ವರದಿ ಶಿವಮೊಗ್ಗ:

ಶ್ರೀಗಂಧ ಹಾಗೂ ಬೀಟೆ ನಾಟಾ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿ ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ವೃತ್ತಿಪರ ಆರೋಪಿಯನ್ನು ಆಯನೂರು ಮತ್ತು ಅರಸಾಳು ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತನನ್ನು ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಗವಟೂರು ನಿವಾಸಿ ಸೀತಾರಾಮಪ್ಪ ಬಿನ್ ಗಂಗಾನಾಯ್ಕ(46) ಎಂದು ಗುರುತಿಸಲಾಗಿದೆ. ಈತ ಬಾಲ್ಯದ ದಿನಗಳಿಂದಲೂ ಮರಗಳನ್ನು ಕಡಿತಲೆ ಮಾಡಿ ಅಕ್ರಮ ಸಾಗಣೆ ಮಾಡುತ್ತಿದ್ದು, ಈವರೆಗೂ ಸಿಕ್ಕಿರಲಿಲ್ಲ ಎನ್ನಲಾಗಿದೆ. ವಿವಿಧ ಅರಣ್ಯ ಇಲಾಖೆ ವಲಯಗಳಲ್ಲಿ ಈತನ ವಿರುದ್ಧ ದೂರುಗಳು ದಾಖಲಾಗಿದ್ದವು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಕೊನೆಗೂ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಆಯನೂರು ವಲಯ ಅರಣ್ಯಾಧಿಕಾರಿ ಕೆ.ರವಿ, ಸಿಬ್ಬಂದಿಗಳಾದ ವಸಂತಕುಮಾರ್, ನಾಗರಾಜ, ವಿಜಯ್, ಚಾಲಕ ಅವಿನಾಶ್ ಹಾಗೂ ಅರಸಾಳು ವಲಯದ ವಲಯ ಅರಣ್ಯಾಧಿಕಾರಿ ರಾಜೇಂದ್ರ ಪ್ರಸಾದ್, ಉಪವಲಯ ಅರಣ್ಯಾಧಿಕಾರಿ ಮಹೇಶ್, ಸ್ವಾಮಿ, ಸಿಬ್ಬಂದಿಗಳಾದ ಚಂದ್ರಶೇಖರ್, ಹರೀಶ್ ನಾಯ್ಕ, ಬಸವರಾಜ್ ಬಿಸನಾಳ್, ಅನಿಲ್ ರಾಥೋಡ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss