ಬಾಂಗ್ಲಾ ಪ್ರತಿಭಟನೆಯಲ್ಲಿ ಬಂಧಿತ ಇಸ್ಕಾನ್ ಗುರು ಕೃಷ್ಣ ದಾಸ್ ಪರ ವಕೀಲನ ಹತ್ಯೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿದ್ದ ಹಿಂಸಾಚಾರ ವಿರುದ್ಧ ಪ್ರತಿಭಟಿಸಿದ ಹಿಂದು ಮುಖಂಡ ಇಸ್ಕಾನ್ ಗುರು ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಾಚಾರಿಯನ್ನು ಬಂಧಿಸಲಾಗಿದೆ. ಕೃಷ್ಣ ದಾಸ್ ಬಂಧನದ ಬೆನ್ನಲ್ಲೇ ಬಿಡುಗಡೆಗಾಗಿ ಭಾರೀ ಪ್ರತಿಭಟನೆ ಆರಂಭಗೊಂಡಿದೆ.

ಇಂದು ಕೃಷ್ಣದಾಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ನ್ಯಾಯಾಲಯ ಜಾಮೀನು ನಿರಾಕರಿಸಾಗಿದೆ. ಇದರ ಬೆನ್ನಲ್ಲೇ ಕೋರ್ಟ್ ಹೊರಗಡೆ ನಡೆದ ಪ್ರತಿಭಟನೆಯಲ್ಲಿ ಕೃಷ್ಣದಾಸ್ ಪರ ವಕೀಲರ ಹತ್ಯೆ ಮಾಡಲಾಗಿದೆ.

ಮಾಧ್ಯಮ ವರದಿ ಪ್ರಕಾರ, ಬಾಂಗ್ಲಾದೇಶ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಉಗ್ರ ಪ್ರತಿಭಟನೆಯಲ್ಲಿ ಹಿಂದು ಪೂಜಾರಿ ಚಿನ್ಮೋಯ್ ಕೃಷ್ಣ ದಾಸ್ ಅವರ ಪರ ವಕೀಲರೊಬ್ಬರನ್ನು ಹತ್ಯೆ ಮಾಡಲಾಗಿದೆ. ಚಿನ್ಮೋಯ್ ಕೃಷ್ಣ ದಾಸ್ ಅವರ ಬಂಧನವನ್ನು ವಿರೋಧಿಸಿ ಬಾಂಗ್ಲಾದೇಶದ ಚಟ್ಟೋಗ್ರಾಮ್ ನ್ಯಾಯಾಲಯದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಜಮಾಯಿಸಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಕೃಷ್ಣ ದಾಸ್ ಅವರನ್ನು ಜೈಲಿಗೆ ಕರೆದೊಯ್ಯುತ್ತಿದ್ದ ವಾಹನವನ್ನು ಬೆಂಬಲಿಗರು ತಡೆದಾಗ ಸೈಫುಲ್ ಇಸ್ಲಾಂ ಅಲಿಫ್ ಎಂಬ ವಕೀಲರು ಹತ್ಯೆಯಾಗಿದ್ದಾರೆ.ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಜನಸಂದಣಿಯನ್ನು ಚದುರಿಸಲು ಸೌಂಡ್ ಗ್ರೆನೇಡ್‌ಗಳನ್ನು ಬಳಸಿದ್ದಾರೆ. ಈ ಹಿಂಸಾಚಾರದಲ್ಲಿ ಕನಿಷ್ಠ 7 ರಿಂದ 8 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಂಗ್ಲಾದೇಶ ಮಾಧ್ಯಮಗಳ ಪ್ರಕಾರ, ಪ್ರತಿಭಟನಾಕಾರರು ಹಿಂದು ನಾಯಕರನ್ನು ಕರೆದೊಯ್ಯುತ್ತಿದ್ದ ಜೈಲು ವಾಹನವನ್ನು ತಡೆದಾಗ ಹಿಂಸಾಚಾರ ನಡೆದಿದೆ ಎಂದಿದೆ. ಸುಮಾರು ಮೂರು ಗಂಟೆಗಳ ಬಿಕ್ಕಟ್ಟಿನ ನಂತರ, ಪೊಲೀಸರು ಅಶ್ರುವಾಯು, ಸೌಂಡ್ ಗ್ರೆನೇಡ್‌ಗಳನ್ನು ಪ್ರತಿಭಟನೆ ಹತ್ತಿಕ್ಕಲಾಗಿದೆ ಎಂದು ವರದಿಯಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!