Wednesday, June 29, 2022

Latest Posts

ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 8 ಜನರ ಬಂಧನ: 92,810 ರೂ. ನಗದು ಜಪ್ತಿ

ಹೊಸದಿಗಂತ ವರದಿ,ವಿಜಯಪುರ:

ಜಿಲ್ಲೆಯ ಇಂಡಿ ಪಟ್ಟಣದ ಡಿಸಿಸಿ ಬ್ಯಾಂಕ್ ಎದುರಿನ ರೋಹಿತ ಶಹಾ ಎಂಬವರ ಕಾಂಪ್ಲೆಕ್ಸಿನ ಮಹಡಿ ಬಳಿ 20-20 ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 8 ಜನರನ್ನು ಸಿಇಎನ್ ಪೊಲೀಸರು ಬಂಧಿಸಿ, 92,810 ರೂ.ಗಳ ನಗದು ಸೇರಿದಂತೆ 16 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿನ ಶಿವು ಉರ್ಫ್ ಶಿವಪುತ್ರ ಚಂದ್ರಾಮ ಬಗಲಿ, ಧರ್ಮು ಉರ್ಫ್ ಧರ್ಮೇಂದ್ರ ಹುಚ್ಚಪ್ಪ ಹರಿಜನ, ಸಾಗರ ಸಿದರಾಮ ಶಿಂದೆ ಉರ್ಫ್ ಬಾಟ, ಅಶ್ವತ್ಥ ಅಶೋಕ ಬನಸೋಡೆ, ಮಹ್ಮದಶಫಿಕ್ ಶಕೀಲ್ ಶೇಖ, ಮಹೇಶ ಭೀಮಪ್ಪ ಆನಂದ, ರಾಹುಲ್ ಮನೋಹರ ಶೇರಖಾನೆ, ಸಚಿನ್ ವಿಠ್ಠಲ ರಾಠೋಡ ಬಂಧಿತ ಆರೋಪಿಗಳು.
ಈ ಆರೋಪಿಗಳು 20-20 ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ವಿಜಯಪುರ ಸಿಇಎನ್ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ ಲ್ಯಾಪ್‌ಟಾಪ್, ಜಿಯೋ ವೈಫೈ ಡೊಂಗಲ್, 92,810 ನಗದು ಸೇರಿದಂತೆ 16 ಮೊಬೈಲ್ ಅನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss