Monday, July 4, 2022

Latest Posts

ಯುಗಾದಿ ಹಬ್ಬಕ್ಕೆಂದು ಅಣ್ಣನ ಮನೆಗೆ ಬಂದ ತಮ್ಮ, ಬೀರುವಿನಲ್ಲಿದ್ದ ಹಣ ಕದ್ದು ಸಿಕ್ಕಿ ಬಿದ್ದ!

ಹೊಸದಿಗಂತ ವರದಿ, ಮೈಸೂರು: 

ಯುಗಾದಿ ಹಬ್ಬಕ್ಕೆಂದು ಅಣ್ಣನ ಮನೆಗೆ ಬಂದ ತಮ್ಮ ಲಕ್ಷಾಂತರ ರೂ ಹಣವನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿದೆ.
ಸ್ವಾಮಿ ಬಂಧಿತ ಆರೋಪಿ. ಈತ ಯುಗಾದಿ ಹಬ್ಬಕ್ಕಾಗಿ ಹೆಡಿಯಾಲ ಗ್ರಾಮದಲ್ಲಿರುವ ತನ್ನ ಅಣ್ಣನ ಮನೆಗೆ ಪತ್ನಿಯೊಂದಿಗೆ ಬಂದಿದ್ದ. ಒಂದು ತಿಂಗಳು ತಂಗುವುದಾಗಿ ಹೇಳಿ ಬಂದಿದ್ದ ಈತ, ಅಣ್ಣ ಬೀರುವಿನಲ್ಲಿ ಇಟ್ಟಿದ್ದ 3.30 ಲಕ್ಷ ರೂ. ಅನ್ನು ಲಪಟಾಯಿಸಿ, ಬಂದ ಮಾರನೇ ದಿನವೇ ತಾನಿದ್ದ ಊರಿಗೆ ತಮ್ಮ ವಾಪಸ್ ಆಗಿದ್ದಾನೆ. ಈ ವೇಳೆ ಅಣ್ಣ ಬೀರುವನ್ನು ನೋಡಿದಾಗ ಹಣ ಕಳವಾಗಿರುವುದು ಗೊತ್ತಾಗಿದೆ. ತಮ್ಮನಿಗೆ ಫೋನ್ ಕರೆ ಮಾಡಿ ಕೇಳಿದರೆ, ಆತ ಉಡಾಫೆಯಿಂದ ಉತ್ತರಿಸಿದ್ದಾರೆ.
ಇದರಿಂದ ಅನುಮಾನಗೊಂಡ ಅಣ್ಣ ವೆಂಕಟರಾಜು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕಾರ್ಯಾಚರಣೆ ನಡೆಸಿದ ಪೊಲೀಸರು, ಹಣ ಎಗರಿಸಿದ್ದ ವೆಂಕಟರಾಜುವಿನ ತಮ್ಮ ಮತ್ತು ಆತನ ಹೆಂಡತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss