Saturday, August 13, 2022

Latest Posts

ಗಂಗೆಯಲ್ಲಿ ಬಂದ ಶವಗಳ ಫೊಟೋ 2015ರದು !

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಗಂಗೆಯಲ್ಲಿ ಇತ್ತೀಚೆಗೆ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 71 ಶವಗಳು ನಿಗೂಢವಾಗಿ ಪತ್ತೆಯಾಗಿರುವುದು ಒಂದೆಡೆ ಇದ್ದರೆ, ಮಾಧ್ಯಮಗಳ ಒಂದುವರ್ಗ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನೂರಾರು ಶವಗಳು ಗಂಗೆಯಲ್ಲಿ ತೇಲಿಬರುತ್ತಿವೆ ಎಂಬ ವರದಿಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ ಎಂಬುದಕ್ಕೆ ಈಗ ಪುಷ್ಟಿ ಲಭಿಸಿದೆ.ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಗುಪ್ತ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ , ಕಾಗೆಗಳು, ನಾಯಿಗಳು ಸುತ್ತುವರಿದಿರುವ ಶವಗಳ ಫೊಟೋ 2015ರ ಜನವರಿಯಲ್ಲಿ ಪ್ರಕಟವಾದವುಗಳು ಎಂಬುದೀಗ ಬಯಲಾಗಿದೆ.
ಬಿಹಾರದ ಬುಕ್ಸಾರ್ ಜಿಲ್ಲೆಯಲ್ಲಿ ಇತ್ತೀಚೆಗೆ 71ಶವಗಳು ಪತ್ತೆಯಾಗಿದ್ದವು. ಇದರ ಬೆನ್ನಿಗೇ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಗಂಗಾ ನದಿಯಲ್ಲಿ ನೂರಾರು ಶವಗಳು ತೇಲಿ ಬಂದಿವೆ ಎಂದು ಹೇಳಿಕೊಂಡು ಚಿತ್ರವೊಂದು ವೈರಲ್ ಆಗಿತ್ತು.ಈ ಶವಗಳು ನದಿಯಲ್ಲಿದ್ದು, ಸುತ್ತ ನಾಯಿಗಳು ಮತ್ತು ಕಾಗೆಗಳು ಹಾರಾಡುತ್ತಿರುವುದು ಕಂಡುಬರುತ್ತದೆ. ಆಮ್ ಆದ್ಮಿ ರಾಜ್ಯಸಭಾ ಸದಸ್ಯನಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಗುಪ್ತಾ ಪೋಸ್ಟ್ ಮಾಡಿರುವ ಚಿತ್ರಕ್ಕೆ ,500ರಷ್ಟು ಶವಗಳು ಬಿಹಾರದ ಬಕ್ಸಾರ್ ಮತ್ತು ಬೀರ್‌ಪುರ ಪ್ರದೇಶಗಳಲ್ಲಿ ತೇಲಿ ಬಂದಿವೆ. ಅನೇಕ ದೇಹಗಳನ್ನು ಕೊರೋನಾ ಕಿಟ್‌ಗಳಿಂದ ಸುತ್ತಲಾಗಿದೆ.ಇದು ಉತ್ತರಪ್ರದೇಶ ಮತ್ತು ಬಿಹಾರ ಸರಕಾರ ಸಂವೇದನಾಶೂನ್ಯವಾಗಿವೆ ಎಂಬುದಕ್ಕೆ ಸಾಕ್ಷಿ ಎಂದು ಅಡಿಬರಹ ಹಾಕಲಾಗಿತ್ತು. ಬಳಿಕ ಈ ಚಿತ್ರವನ್ನು ಹಂಚಿಕೊಂಡ ಸಾಮಾಜಿಕ ಜಾಲತಾಣಗಳಲ್ಲಿನ ಜನರು ಹಿಂದೆಮುಂದೆ ನೋಡದೆ ಉತ್ತರಪ್ರದೇಶ ಮತ್ತು ಬಿಹಾರ ಸರಕಾರಗಳಲ್ಲದೆ ಮೋದಿ ಸರಕಾರಕ್ಕೂ ಮನಸೋ ಇಚ್ಛೆ ನಿಂದಿಸಿದ್ದಾರೆ !
ಆದರೆ ಈಗ ಈ ಚಿತ್ರದ ಅಸಲಿಯತ್ತು ಬಯಲಿಗೆ ಬಂದಿದೆ.ಇದು 2015ರ ಜನವರಿಯಲ್ಲಿ ಉತ್ತರಪ್ರದೇಶ (ಯೋಗಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಅಂದರೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಆಡಳಿತದಲ್ಲಿದ್ದ ಅವ)ದ ಕಾನ್ಪುರ ಮತ್ತು ಉನ್ನಾವೊಗಳ ಮಧ್ಯೆ ಬರುವ ಪರಿಯಾರ್ ಬಳಿ ಗಂಗೆಯಲ್ಲಿ ಪತ್ತೆಯಾದ ಶವಗಳದ್ದಾಗಿದೆ ಎಂಬುದು ಬಹಿರಂಗಗೊಂಡಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss