Saturday, August 13, 2022

Latest Posts

ಕಲಾವಿದ ಮೈಕ್ ಚಂದ್ರು ನಿಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ: ಮೈಸೂರು:

ಮೈಕ್ ಚಂದ್ರು ಎಂದೇ ಚಿರಪರಿಚಿತರಾದ ಕಲಾವಿದ ಎನ್.ಚಂದ್ರಶೇಖರ್ (69) ಭಾನುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು.
ತಿ.ನರಸೀಪುರ ಮೂಲದವರಾದ ಚಂದ್ರಶೇಖರ್ ಅವರು ಎನ್.ನಾರಾಯಣ ರಾವ್, ವಿಶಾಲಾಕ್ಷಮ್ಮ ದಂಪತಿ ಪುತ್ರರಾಗಿ ಜನಿಸಿದರು. ಡಿ.ಬನುಮಯ್ಯ ಕಾಲೇಜಿನಲ್ಲಿ ಪದವಿ ಪಡೆದರು. ಶಾಲೆಯಲ್ಲಿ ಭಕ್ತಪ್ರಹ್ಲಾದ ನಾಟಕದಲ್ಲಿ ಸಣ್ಣ ಪಾತ್ರವೊಂದನ್ನು ನಿರ್ವಹಿಸಿದ್ದರು. ಅಲ್ಲಿಂದಾಚೆಗೆ ರಂಗಭೂಮಿ ಕಡೆಗೆ ಆಸಕ್ತಿ ಬೆಳೆಸಿಕೊಂಡರು. ಸದಾರಮೆ ನಾಟಕದ ಪ್ರಚಾರಕ್ಕಾಗಿ ಮೈಕ್ ಚಂದ್ರು ಅವರನ್ನು ನಿಯೋಜಿಸಿಕೊಳ್ಳಲಾಗಿತ್ತು.
ಮಾನ್ಯರೇ ಮತ್ತು ಮಹಿಳೆಯರೇ ಎಂದು ಮೈಕ್‌ನಲ್ಲಿ ಕೂಗುತ್ತಾ ಆಟೋ ಬೀದಿ ಬೀದಿಯಲ್ಲಿ ಸಾಗುತ್ತಿದ್ದರೆ, ಆ ಧ್ವನಿ ಕೇಳಿದ ಕೂಡಲೇ ಮೈಕ್ ಚಂದ್ರು ಅಂಕಲ್ ಬಂದರು ಎಂದು ಎಲ್ಲರೂ ಗುರುತಿಸುತ್ತಿದ್ದರು. ಆಟೋದಲ್ಲಿ ಸ್ಪೀಕರ್ ಇಟ್ಟುಕೊಂಡು ಮೈಕ್ ಚಂದ್ರು ಸಾರುತ್ತಾ ಮುಂದೆ ಸಾಗಿದರೆ, ಮನೆಯಿಂದ ಎಲ್ಲರೂ ಆಚೆ ಬಂದು ಮೈಕ್ ಚಂದ್ರು ನೀಡುವ ಪಾಂಪ್ಲೆಟ್ ಪಡೆದು ತೆರಳುತ್ತಿದ್ದರು.
ತಮ್ಮ ಶುಶ್ರಾವ್ಯ ಕಂಠದಿಂದಲೇ ಮೈಕ್ ಚಂದ್ರು ನಗರದ ಜನತೆಗೆ ಮಾಹಿತಿ, ಸಂದೇಶಗಳನ್ನು ಒದಗಿಸುತ್ತಿದ್ದರು. ಹೀಗೆ ಅವರು ಸಾರ್ವಜನಿಕ ಪ್ರಚಾರ ಜೀವನದಲ್ಲಿ ತುಂಬಾ ಚಿರಪರಿಚಿತರಾದರು.
ಡಾ.ರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು:
1980ರಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ಡಾ. ರಾಜ್‌ಕುಮಾರ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದು ಮೈಕ್ ಚಂದ್ರು ಅವರ ಜೀವನದ ಅವಿಸ್ಮರಣೀಯ ದಿನ. ಅಣ್ಣಾವ್ರ ಅಪ್ಪಟ ಅಭಿಮಾನಿ ಮೈಕ್ ಚಂದ್ರು. ಅವರೇ ಇರುವ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವುದು ಸೌಭಾಗ್ಯವೇ ಸರಿ ಎಂದು ಈ ಹಿಂದೆ ಸ್ಮರಿಸಿದ್ದರು. ಸಾಮಾನ್ಯವಾಗಿ ಎಸ್.ಕೆ.ಭಗವಾನ್ ಅವರು ಡಾ. ರಾಜ್‌ಕುಮಾರ್ ಅವರ ಯಾವುದೇ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ. ಆ ಅವಕಾಶ ಮೈಕ್ ಚಂದ್ರು ಅವರಿಗೆ ಲಭಿಸಿ, ಬಹಳ ಅಚ್ಚಕಟ್ಟಾಗಿ ನಿರೂಪಣೆ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss