ಭಾರತದ ತಂಟೆಗೆ ಬಂದರೆ ತಟ್ಟದೆ ಬಿಡುವುದಿಲ್ಲ: ಚೀನಾಗೆ ಅರುಣಾಚಲ ಸಿಎಂ ಖಡಕ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಚೀನಾ ಸೈನಿಕರಿಗೆ ಭಾರತದ ಯೋಧರು ಸರಿಯಾಗಿ ತಿರುಗೇಟು ನೀಡಿದ್ದು, ಇದೀಗ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಕೂಡ ‘ಭಾರತದ ತಂಟೆಗೆ ಬಂದರೆ ತಟ್ಟದೆ ಬಿಡುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಇದು 1962ರಲ್ಲಿ ನಡೆದ ಯುದ್ಧದ ಸಂದರ್ಭ ಅಲ್ಲ. ಗಡಿಯಲ್ಲಿ ನಡೆಯುವ ಯಾವುದೇ ಆಕ್ರಮಣಕಾರಿ ಚಟುವಟಿಕೆಯನ್ನು ನಮ್ಮ ಯೋಧರು ಹಿಮ್ಮೆಟ್ಟಿಸುತ್ತಾರೆ. ನಮ್ಮ ತಂಟೆಗೆ ಬರುವವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ನೆರೆ ರಾಷ್ಟ್ರಗಳ ಯಾವುದೇ ಉಪಟಳ ನಡೆಯುವುದಿಲ್ಲ’ ಎಂದು ಹೇಳಿದ್ದಾರೆ.

ಈ ಹಿಂದೆ 1962ರ ಪರಿಸ್ಥಿತಿಯೇ ಬೇರೆ ಇತ್ತು. ಆದ್ರೆ ಈಗ ಹಾಗೇ ಇಲ್ಲ. ಹಿಂದೆ ಗಡಿಯಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿ ಇರಲಿಲ್ಲ. ಆದ್ರೆ ಕಳೆದ ಎಂಟು ವರ್ಷಗಳಲ್ಲಿ ಗಡಿ ಭಾಗಗಳಲ್ಲಿ ಮೂಲ ಸೌಕರ್ಯದ ಅಭಿವೃದ್ಧಿಯಾಗಿದೆ. ದೇಶದ ಸೇನೆಯು ಮತ್ತಷ್ಟು ಬಲಿಷ್ಠವಾಗಿದೆ’ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!