Saturday, August 13, 2022

Latest Posts

ಸುಂದರ್‌ಲಾಲ್‌ ಬಹುಗುಣ ಅವರಿಗೆ ‘ಭಾರತ ರತ್ನ’ ನೀಡಿ: ಪ್ರಧಾನಿಗೆ ಪತ್ರ ಬರೆದ ಅರವಿಂದ್ ಕೇಜ್ರಿವಾಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿಯ ನೇತಾರ ದಿವಂಗತ ಸುಂದರ್‌ಲಾಲ್‌ ಬಹುಗುಣ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ದೆಹಲಿಯ ವಿಧಾನಸಭೆಯಲ್ಲಿ ಆಯೋಜಿಸಿದ್ದ ಖ್ಯಾತ ಪರಿಸರವಾದಿ ಸುಂದರ್‌ಲಾಲ್‌ ಬಹುಗುಣ ಅವರಿಗೆ ಗೌರವ ನಮನ ಅರ್ಪಿಸುವ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅರವಿಂದ ಕೇಜ್ರಿವಾಲ್, ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.
‍’ಸುಂದರ್‌ಲಾಲ್‌ ಬಹುಗುಣ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿದರೆ, ಆ ಪ್ರಶಸ್ತಿ ಮೌಲ್ಯವೇ ಹೆಚ್ಚಾಗುತ್ತದೆ ಎಂದು ಭಾವಿಸಿದ್ದೇವೆ’ ಎಂದು ಕೇಜ್ರಿವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಹುಗುಣ ಅವರು ಕಣಿವೆ ರಾಜ್ಯ ಉತ್ತರಾಖಂಡದ ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮೀಸಲಿಟ್ಟಿದ್ದಾರೆ. ವೃಕ್ಷ ರಕ್ಷಣೆಯ ‘ಚಿಪ್ಕೊ ಚಳವಳಿ’ಯಿಂದ ಆರಂಭವಾದ ಅವರ ಪರಿಸರ ಸಂರಕ್ಷಣಾ ಅಭಿಯಾನ, ಬೇರೆ ಬೇರೆ ರಾಜ್ಯಗಳಿಗೂ ವಿಸ್ತರಿಸಿತು. ಕಳೆದ ಮೇ 21ರಂದು 94ನೇ ವಯಸ್ಸಿನಲ್ಲಿ ಬಹುಗುಣ ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss