ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ರಾಮಾಯಣ’ ಧಾರಾವಾಹಿ ಆರ್ಯ ಸುಮಂತ್ ಪಾತ್ರಧಾರಿ ನಟ ಚಂದ್ರಶೇಖರ್ ನಿಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

‘ರಾಮಾಯಣ’ ಧಾರಾವಾಹಿ ಆರ್ಯ ಸುಮಂತ್ ಪಾತ್ರಧಾರಿ ನಟ ಚಂದ್ರಶೇಖರ್ (98) ನಿಧನರಾದರು.
ಕಳೆದ ಕೆಲವು ದಿನಗಳಿಂದ ವಯೋಸಹಜ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಮುಂಬೈನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.
ನನ್ನ ತಂದೆ ನಿದ್ರೆ ಮಾಡುತ್ತಿರುವಾಗ ನಿಧನರಾಗಿದ್ದಾರೆ.ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ಚಂದ್ರಶೇಖರ್ ಅವರ ಪುತ್ರ ನಿರ್ಮಾಪಕ ಅಶೋಕ್ ಶೇಖರ್ ಟ್ವೀಟ್ ಮಾಡಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ ಜುಹುವಿನ ಪೊವಾನ್ ಹ್ಯಾನ್ಸ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ನಟನೆಯ ಬಗ್ಗೆ ಒಲವು ಹೊಂದಿದ್ದ ಅವರು 1950 ರಲ್ಲಿ ಕಿರಿಯ ಕಲಾವಿದರಾದರು. ಆ ನಂತರ ಅವರು ‘ಸುರಂಗ್’ ಚಿತ್ರದ ಮೂಲಕ ನಾಯಕನಾಗಿ ಹೆಸರುವಾಸಿಯಾದರು. ರಾಮನಂದ್ ಸಾಗರ್ ಅವರು ನಿರ್ದೇಶಿಸಿದ ‘ರಾಮಾಯಣ’ ಧಾರಾವಾಹಿಯಲ್ಲಿ ಆರ್ಯ ಸುಮಂತ್ ನಟಿಸಿ ಅಪಾರ ಜನಮನ್ನಣೆ ಗಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss