ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಆರ್ಯನ್ ಖಾನ್ ಗೆ ನ್ಯಾಯಾಂಗ ಬಂಧನವಾಗಿದೆ. ಮಗನ ಎಡವಟ್ಟಿನಿಂದ ಶಾರುಖ್ ಖಾನ್ ಗೆ ಒಂದರ ಹಿಂದೆ ಒಂದು ಸಮಸ್ಯೆಗಳು ಎದುರಾಗುತ್ತಿದೆ.
ಈಗಾಗಲೇ ಮಗನ ಬಂಧನದಿಂದ ಸಿನಿಮಾ ಚಿತ್ರೀಕರಣ ನಿಲ್ಲಿಸಿದ್ದ ಶಾರುಖ್ ಗೆ ಇದೀಗ ಜಾಹೀರಾತಿನಿಂದ ಹೊಡೆತ ಬಿದ್ದಿದೆ. ನಟ ಶಾರುಖ್ ಖಾನ್ ನಟನೆ ಮಾಡಿದ್ದ ಜಾಹೀರಾತುವೊಂದನ್ನ ಇದೀಗ ತಡೆಹಿಡಿಯಲಾಗಿದೆ. ಪ್ರತಿಷ್ಠಿತ ಏಷ್ಯುಕೇಶನಲ್ ಕಂಪನಿಯ ಕಲಿಕಾ ಆಪ್ ಬೈಜುಸ್ ನಲ್ಲಿ ಶಾರುಖ್ ಖಾನ್ ನಟನೆ ಮಾಡಿದ್ದರು. ಆದರೆ, ಅವರ ಮಗ ಡ್ರಗ್ಸ್ ಕೇಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಕಂಪನಿ ಈ ನಿರ್ಧಾರ ಕೈಗೊಂಡಿದೆ. 2017ರಿಂದಲೂ ಶಾರುಖ್ ಖಾನ್ ಏಷ್ಯುಕೇಶನಲ್ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದಕ್ಕಾಗಿ ಪ್ರತಿ ವರ್ಷ ಶಾರುಖ್ ಖಾನ್ 3-4 ಕೋಟಿ ರೂ. ವಾರ್ಷಿಕ ಆದಾಯ ಪಡೆದುಕೊಳ್ಳುತ್ತಿದ್ದರು.
ಶಾರುಖ್ ಖಾನ್ ಏಷ್ಯುಕೇಶನಲ್ ಆ್ಯಪ್ವೊಂದರ ಮುಖಾಂತರ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದಾಗಿದ್ದು, ಸದ್ಯ ಅವರ ಮಗನಿಗೆ ಸರಿಯಾಗಿ ಪಾಠ ಹೇಳದ ನಟ ಬೇರೆ ಮಕ್ಕಳಿಗೆ ಹೇಗೆ ಪಾಠ ಮಾಡಲು ಸಾಧ್ಯ ಎಂಬ ಮಾತು ಕೇಳಿ ಬರಲು ಶುರುವಾಗಿದ್ದು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.
ಡ್ರಗ್ ಪಾರ್ಟಿಯಲ್ಲಿ ಭಾಗಿಯಾದ ಆರೋಪ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿದ್ದು, ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.