Tuesday, June 28, 2022

Latest Posts

ಯುವಕನ ಭವಿಷ್ಯದ ಜೊತೆ ಆಟವಾಡುತ್ತಿರುವುದು ಖೇದರಕರ: ಆರ್ಯನ್ ಬಂಧನಕ್ಕೆ ನಟಿ ರವೀನಾ ಟಂಡನ್ ಬೇಸರ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ನಟಿ ರವೀನಾ ಟಂಡನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತ್ವವೆಟ್ ಮಾಡಿರುವ ರವೀನಾ, ಈ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯ ನೋಡಿದರೆ ಅಸಹ್ಯವಾಗುತ್ತಿದೆ. ಆ ಯುವಕನ ಜೀವನ ಮತ್ತು ಭವಿಷ್ಯದ ಜೊತೆ ಆಟವಾಡುತ್ತಿರುವುದು ಖೇದರಕರ ಎಂದಿದ್ದಾರೆ.
ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಎನ್‍ಸಿಬಿ ಅಧಿಕಾರಿಗಳು ಶಾರುಖ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿದ್ದಾರೆ. ಗುರುವಾರಷ್ಟೇ ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈನ ಕಿಲ್ಲಾ ಕೋರ್ಟ್ ಆದೇಶ ಹೊರಡಿಸಿತು. ಇದೀಗ ಜಾಮೀನು ಅರ್ಜಿ ಕೂಡ ತಿರಸ್ಕಾರವಾಗಿದೆ.
ಆರ್ಯನ್ ಖಾನ್ ಬಂಧನವನ್ನು ಬಾಲಿವುಡ್‍ನ ಹಲವು ಸೆಲೆಬ್ರಿಟಿಗಳು ಖಂಡಿಸಿದ್ದಾರೆ. ಸುನಿಲ್ ಶೆಟ್ಟಿ, ಸುಸ್ಸೇನ್ ಖಾನ್ ಹಾಗೂ ಹೃತಿಕ್ ರೋಷನ್ ಅವರು ಆರ್ಯನ್ ಖಾನ್ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಮನೆಗೆ ತೆರಳಿ ಧೈರ್ಯ ತುಂಬಿ ಬಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss